ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಬಿಜೆಪಿ ಸೇರಬಹುದು ಎಂಬ ಊಹಾಪೋಹ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿತ್ತು. ಇದಕ್ಕೆ ಸ್ವತಃ ಚಂಪೈ ಸೊರೆನ್ ಸ್ಪಷ್ಟನೆ ನೀಡಿದ್ದು ನಾನು ಎಲ್ಲಿದ್ದೇನೋ ಅಲ್ಲೆ ಇರುತ್ತೇನೆ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಚಂಪೈ ಸೊರೆನ್ ಪ್ರಸ್ತುತ ಹೇಮಂತ್ ಸೊರೆನ್ ಸರ್ಕಾರದಲ್ಲಿ ಜಲಸಂಪನ್ಮೂಲ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವರಾಗಿದ್ದಾರೆ. ಈ ಊಹಾಪೋಹಗಳ ನಡುವೆ ಸೊರೆನ್ ತಮ್ಮ ವಿಧಾನಸಭಾ ಕ್ಷೇತ್ರ ಸೇರೈಕೆಲದಲ್ಲಿ ಜಲಸಂಪನ್ಮೂಲ ಇಲಾಖೆಯ ಖಾರ್ಕೈ ಲಿಫ್ಟ್ ಭೂಗತ ಪೈಪ್ಲೈನ್ ನೀರಾವರಿ ಯೋಜನೆಯನ್ನು ಉದ್ಘಾಟಿಸಿದರು. ಬಿಜೆಪಿ ಸೇರಿವ ಊಹಾಪೋಹಗಳ ಬಗ್ಗೆ ಪ್ರಶ್ನಿದ್ದಕ್ಕೆ ಮುಗುಳ್ನಕ್ಕ ಅವರು, ನಾನು ದೆಹಲಿಯಲ್ಲಿಲ್ಲ. ಇಲ್ಲಿಯೇ ಇದ್ದೇನೆ ಎಂದು ಹೇಳಿದ್ದು ನನ್ನ ರಾಜಕೀಯ ಜೀವನ ಇನ್ನೂ ದೀರ್ಘವಾಗಿದೆ ಎಂದರು.
ಮತ್ತೊಂದೆಡೆ, ಇತ್ತೀಚೆಗೆ ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮಾಜಿ ಬೋರಿಯೊ ಶಾಸಕ ಲೋಬಿನ್ ಹೆಂಬ್ರಾಮ್ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಲೋಬಿನ್ ಹೆಂಬ್ರಾಮ್ ಅವರು ರಾಜಮಹಲ್ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮೋರ್ಚಾ ಅಧ್ಯಕ್ಷ ಶಿಬು ಸೊರೇನ್ ಅವರ ದೂರಿನ ಮೇರೆಗೆ ವಿಧಾನಸಭಾಧ್ಯಕ್ಷರು ಅವರನ್ನು ಅನರ್ಹಗೊಳಿಸಿದ್ದಾರೆ. ಲೋಬಿನ್ ಹೆಂಬ್ರಾಮ್ ಅವರು ಮೋರ್ಚಾದ ಉನ್ನತ ನಾಯಕತ್ವದ ವಿರುದ್ಧ ದೀರ್ಘಕಾಲ ಮಾತನಾಡಿದ್ದರು.
ಚಂಪೈ ಸೊರೆನ್ ಬಗ್ಗೆ ಊಹಾಪೋಹಗಳಿಗೆ ಕಾರಣವೂ ಇದೆ. ಅವರನ್ನು ಸೆಳೆಯಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದೆ. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಬಿಜೆಪಿಯ ಹಿರಿಯ ನಾಯಕರು ಹಲವು ಬಾರಿ ಚಂಪೈ ಸೊರೆನ್ ಅವರನ್ನು ಹೊಗಳಿದ್ದಾರೆ. ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿಯೂ ಬಿಜೆಪಿ ನಾಯಕರು ಸದನದೊಳಗೆ ಹೊಗಳಿದ್ದರು. ಬಿಜೆಪಿಯ ಚುನಾವಣಾ ಸಹ-ಪ್ರಭಾರಿ ಹಿಮಂತ ಬಿಸ್ವಾ ಶರ್ಮಾ ಮತ್ತು ರಾಜ್ಯ ಅಧ್ಯಕ್ಷ ಬಾಬುಲಾಲ್ ಮರಾಂಡಿ ಅವರೊಂದಿಗೆ ಸಹಾನುಭೂತಿ ವ್ಯಕ್ತಪಡಿಸುವಾಗ ಜೆಎಂಎಂ ನಾಯಕತ್ವವನ್ನು ಹಲವಾರು ಬಾರಿ ಗುರಿಯಾಗಿಸಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನವೇ ಸೀತಾ ಸೊರೆನ್ ಬಿಜೆಪಿ ಸೇರುವ ಮೂಲಕ ಜೆಎಂಎಂಗೆ ಆಘಾತ ನೀಡಿದ್ದರು. ಬಿಜೆಪಿ ತನ್ನ ಘೋಷಿತ ಅಭ್ಯರ್ಥಿ ಸುನಿಲ್ ಸೊರೆನ್ ಅವರನ್ನು ದುಮ್ಕಾದಿಂದ ಕಣಕ್ಕಿಳಿಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ.