ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಇಂದು 45 ಶಾಸಕರ ಬಹುಮತದೊಂದಿಗೆ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಹೇಮಂತ್ ಸೊರೇನ್ ಸಚಿವ ಸಂಪುಟ ವಿಸ್ತರಣೆ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಪೊರೆಯಹತ್ ಶಾಸಕ ಪ್ರದೀಪ್ ಯಾದವ್ ತಿಳಿಸಿದ್ದಾರೆ.
81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ ಮೈತ್ರಿಕೂಟವು ಪ್ರಸ್ತುತ ಜೆಎಂಎಂನಿಂದ 27, ಕಾಂಗ್ರೆಸ್ನಿಂದ 17 ಮತ್ತು ಆರ್ಜೆಡಿಯಿಂದ ಒಬ್ಬರು ಹೀಗೆ 45 ಶಾಸಕರನ್ನು ಹೊಂದಿದೆ. ಅದೇ ವೇಳೆ ಬಿಜೆಪಿ ಒಟ್ಟು 24 ಶಾಸಕರನ್ನು ಹೊಂದಿದೆ.
ಲೋಕಸಭೆ ಚುನಾವಣೆಯ ನಂತರ, ಜಾರ್ಖಂಡ್ ವಿಧಾನಸಭೆಯಲ್ಲಿ ಶಾಸಕರ ಸಂಖ್ಯೆ ಕಡಿಮೆಯಾಯಿತು, ಕೆಲವರು ಸಂಸದರಾದರು. ಇತರರು ರಾಜೀನಾಮೆ ನೀಡಿದರು ಅಥವಾ ಹೊರಹಾಕಲ್ಪಟ್ಟರು. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯ ಪ್ರಸ್ತುತ ಸಂಖ್ಯಾಬಲ 76 ಇದೆ.