ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಜಿಯೋ ಕಂಪನಿ ಇದೀಗ ಜಗತ್ತಿನ ನಂ.1 ಮೊಬೈಲ್ ಡೇಟಾ ಕಂಪನಿಯಾಗಿ ಹೊರಹೊಮ್ಮಿದೆ. ಜಿಯೋ ಬಳಿ ಈಗ 49 ಕೋಟಿ ಗ್ರಾಹಕರಿದ್ದು, ಇವರು ಮಾಸಿಕ ಸರಾಸರಿ 30 ಜಿ.ಬಿ. ಡೇಟಾ ಬಳಕೆ ಮಾಡುತ್ತಿದ್ದಾರೆ. ಗುರುವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್ನ 47ನೇ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಈ ವಿಷಯ ತಿಳಿಸಿದರು.
ಭಾರತವೀಗ ಜಗತ್ತಿನ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿದ್ದು, ಜಿಯೋ ಕಂಪನಿಯು ಜಗತ್ತಿನ ಮೊಬೈಲ್ ಟ್ರಾಫಿಕ್ನಲ್ಲಿ ಶೇ.8ರಷ್ಟು ಪಾಲು ಹೊಂದಿದೆ. ಜಗತ್ತಿನ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳನ್ನು ಜಿಯೋ ಹಿಂದಿಕ್ಕಿದೆ ಎಂದು ಹೇಳಿದರು.