ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್ ಸೇವೆಗಳು ಜನಸಾಮಾನ್ಯರಿಗೂ ಲಭಿಸುವಂತೆ ಮಾಡಲು ರಿಲಯನ್ಸ್ ಸಮೂಹದ ಜಿಯೋ ಕಂಪನಿ ತನ್ನ ಎಲ್ಲ ಗ್ರಾಹಕರಿಗೆ 100 ಜಿ.ಬಿ.ವರೆಗಿನ ಎಐ-ಕ್ಲೌಡ್ ಸ್ಟೋರೇಜನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿದೆ.
ಜಿಯೋ ಎಐ-ಕ್ಲೌಡ್ ಸೇವೆಯನ್ನು ಬಳಸಿಕೊಂಡು ಜಿಯೋ ಗ್ರಾಹಕರು 100 ಜಿ.ಬಿ.ಯಷ್ಟು ಫೋಟೋ, ವಿಡಿಯೋಗಳು, ದಾಖಲೆಗಳು ಹಾಗೂ ಡಿಜಿಟಲ್ ಕಂಟೆಂಟ್ಗಳನ್ನು ಉಚಿತವಾಗಿ ತಮ್ಮ ಮೊಬೈಲ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನ ಹೊರಗೆ ಇಂಟರ್ನೆಟ್ನಲ್ಲೇ ಸೇವ್ ಮಾಡಿ ಇರಿಸಿಕೊಂಡು, ಬೇಕೆಂದಾಗ ಬಳಸಿಕೊಳ್ಳಬಹುದು. ದೀಪಾವಳಿಯಿಂದ ಈ ಸೇವೆ ಎಲ್ಲಾ ಜಿಯೋ ಗ್ರಾಹಕರಿಗೂ ಲಭ್ಯವಾಗಲಿದೆ. ಎಐ ತಂತ್ರಜ್ಞಾನ ಬಳಸಲು ಹೆಚ್ಚು ಸ್ಪೇಸ್ ಬೇಕಾಗುತ್ತದೆ. ಇದನ್ನು ಜಿಯೋ ಕ್ಲೌಡ್ ನೀಡಲಿದೆ.