ಚೀನಾದ ವಸ್ತುಗಳ ಮೇಲೆ ಅಮೆರಿಕ ಭಾರಿ ತೆರಿಗೆಯನ್ನು ಹೇರಿದೆ. ಶ್ವೇತಭವನದ ರೋಸ್ ಗಾರ್ಡನ್ ನಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಜೋ ಬೈಡನ್ ನಮಗೆ ಬೇಕಾದ ಯಾವುದೇ ಕಾರುಗಳಿಲ್ಲ. ನಾವು ಖರೀದಿ ಮಾಡುತ್ತೇವೆ ಆದರೆ ಕಾರು ಮಾರುಕಟ್ಟೆ ಮೇಲೆ ಚೀನಾ ಅನ್ಯಾಯವಾಗಿ ನಿಯಂತ್ರಣವನ್ನು ಹೊಂದಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನಗಳ ಮೇಲೆ ಶೇಕಡ 100 ಪ್ರತಿಶತ ಸನ್ನಿ ಕಂಡಕ್ಟರ್ ಗಳ ಮೇಲೆ 50 ಮತ್ತು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಮೇಲೆ 25% ತೆರಿಗೆ ವಿಧಿಸಲಾಗಿದೆ. ಅಲ್ಯೂಮಿನಿಯಂ, ಎಲೆಕ್ಟ್ರಿಕ್ ವಾಹನಗಳು, ಸೋಲಾರ್ ಪ್ಯಾನೆಲ್ ಗಳು, ಸೆಮಿಕಂಡಕ್ಟರ್, ಸ್ಟೀಲ್ , ಅವಶ್ಯಕ ಆರೋಗ್ಯ ಸಾಧನಗಳಾದ ಗ್ಲೋವ್ ಹಾಗೂ ಮಾಸ್ ಗಳ ತಯಾರಿಕೆಗೆ ಚೀನಾ ಸರ್ಕಾರವು ಖಜಾನೆಯ ಹಣವನ್ನು ಕಂಪನಿಗಳಿಗೆ ಸುರಿಸಿದೆ ಎಂದು ಆರೋಪಿಸಿದ್ದಾರೆ.
ಚೀನಾದೊಂದಿಗೆ ನ್ಯಾಯ ಸಮ್ಮತವಾದ ಸ್ಪರ್ಧೆಯನ್ನು ನಾನು ಬಯಸುತ್ತಿದ್ದೇನೆ ಹೊರತು ಸಂಘರ್ಷವಲ್ಲ. 21ನೇ ಶತಮಾನದ ಚೀನಾ ವಿರುದ್ಧದ ವಾಣಿಜ್ಯ ಸ್ಪರ್ಧೆಯಲ್ಲಿ ಅನ್ಯ ದೇಶಗಳಿಗಿಂತ ನಾವು ಬಲಿಷ್ಠ ಸ್ಥಾನದಲ್ಲಿದ್ದೇವೆ ಎಂದು ಹೇಳಿದ್ದಾರೆ.
ಚೀನಾದ ಉತ್ಪನ್ನಗಳಿಗೆ ಭಾರಿ ಪ್ರಮಾಣದ ಸಬ್ಸಿಡಿಗಳನ್ನು ನೀಡಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ತಯಾರಿಸುತ್ತಿದೆ ಕಡಿಮೆ ದರದಲ್ಲಿ ವಿಶ್ವ ಮಾರುಕಟ್ಟೆಗೆ ಸುರಿಯುತ್ತಿದೆ. ಇದರಿಂದ ಅನ್ಯ ಉದ್ಯಮಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೈಡನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.