ಟಾಲಿವುಡ್ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಜೂ.ಎನ್ಟಿಆರ್ ಚಿರಂಜೀವಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದಾಗಿ ಹಲವಾರು ರೀತಿಯ ಟೀಕೆಗೆ ಗುರಿಯಾಗಿದ್ದರು. ಅಷ್ಟಕ್ಕೂ ಎನ್ಟಿಆರ್ ಏನು ಹೇಳಿದ್ದರು ಎಂಬುದನ್ನ ನಾವಿಲ್ಲಿ ನೋಡೋಣ..
ಜೂ.ಎನ್ಟಿಆರ್ ನಾಯಕ ನಟನಾಗಿ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 18 ವರ್ಷಕ್ಕಿಂತ ಕಡಿಮೆ. ಅವರ ಮೊದಲ ಚಿತ್ರ ನಿನ್ನೂ ಚೂಡಾಲನಿ 2001ರಲ್ಲಿ ತೆರೆಕಂಡಿತ್ತು. ಅದೇ ವರ್ಷ ಸ್ಟೂಡೆಂಟ್ ನಂಬರ್ ಒನ್, ಸುಬ್ಬು ಚಿತ್ರಗಳಲ್ಲಿ ಜೂ.ಎನ್ಟಿಆರ್ ಅಭಿನಯಿಸಿದ್ದರು. ರಾಜಮೌಳಿ ನಿರ್ದೇಶನದ ಸ್ಟೂಡೆಂಟ್ ನಂಬರ್ ಒನ್ ಸೂಪರ್ ಹಿಟ್ಸಿನಿಮಾ ಆಗಿತ್ತು. ತಮ್ಮ ನೃತ್ಯದ ಮೂಲಕ ಜೂ.ಎನ್ಟಿಆರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
2002ರಲ್ಲಿ ಬಿಡುಗಡೆಯಾದ ಆದಿ ಚಿತ್ರದ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಡೆದರು ಜೂ.ಎನ್ಟಿಆರ್. ಇಪ್ಪತ್ತು ವರ್ಷ ತುಂಬುವ ಮೊದಲೇ ಜೂ.ಎನ್ಟಿಆರ್ ಮಾಸ್ ಹೀರೋ ಇಮೇಜ್ ಪಡೆದಿದ್ದರು. ಸಿಂಹಾದ್ರಿ ಚಿತ್ರದ ಮೂಲಕ ಎನ್.ಟಿ.ಆರ್ ಇಮೇಜ್ ಮೇಲ್ದರ್ಜೆಗೆ ಏರಿತು. ರಾಜಮೌಳಿ-ಎನ್.ಟಿ.ಆರ್ ಕಾಂಬಿನೇಷನ್ನ ಸಿಂಹಾದ್ರಿ ಚಿತ್ರರಂಗದ ಹಲವು ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿತ್ತು ಜೊತೆಗೆ ಎನ್.ಟಿ.ಆರ್ ಅವರು ಸ್ಟಾರ್ ನಟರ ಸಾಲಿಗೆ ಸೇರಿಸಿತು. ಈ ಚಿತ್ರ ಬಿಡುಗಡೆಯಾದ ಬಳಿಕ ಜೂ.ಎನ್ಟಿಆರ್ ನೀಡಿದ್ದ ಇಂಟರ್ವ್ಯೂ ವಿವಾದಕ್ಕೆ ಕಾರಣವಾಯಿತು.
ನೇರಪ್ರಸಾರದ ಸಂದರ್ಶನದಲ್ಲಿ ಹಾಜರಾಗಿದ್ದ ಜೂ.ಎನ್ಟಿಆರ್ ಅವರನ್ನು ನಿರೂಪಕರು ಚಿರಂಜೀವಿ ಬಗ್ಗೆ ಪ್ರಶ್ನೆ ಕೇಳಿದ್ದರು. ಟಾಪ್ ಸ್ಟಾರ್ ಆಗಿರುವ ಚಿರಂಜೀವಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ, ಚಿರಂಜೀವಿ ಯಾರು? ನನಗೆ ಗೊತ್ತಿರುವ ದೊಡ್ಡ ಸ್ಟಾರ್.. ನನ್ನ ತಾತ ಮಾತ್ರ ಎಂದಿದ್ದರು. ಅದು ನೇರಪ್ರಸಾರದ ಕಾರ್ಯಕ್ರಮವಾಗಿದ್ದರಿಂದ ಎನ್.ಟಿ.ಆರ್ ಹೇಳಿಕೆ ನೇರವಾಗಿ ಪ್ರಸಾರವಾಗಿತ್ತು. ಯಶಸ್ಸಿನ ಉತ್ತುಂಗದಲ್ಲಿದ್ದ ಎನ್.ಟಿ.ಆರ್ ಹೀಗೆ ಹೇಳಿದ್ದು ಬಹಳ ಚರ್ಚೆಗೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು.
ತಕ್ಷಣವೇ ಟಾಲಿವುಡ್ನ ಮತ್ತೊಬ್ಬ ಸ್ಟಾರ್ ನಾಗಾರ್ಜುನರಿಂದ ಎನ್.ಟಿ.ಆರ್ಗೆ ಕರೆ ಬಂದಿತ್ತಂತೆ. ನೀವು ಏನು ಮಾತನಾಡುತ್ತಿದ್ದೀರಿ? ಹಿರಿಯರ ಬಗ್ಗೆ ಹೀಗೆ ಮಾತನಾಡುವುದೇ? ಎಂದು ನಾಗಾರ್ಜುನ ಬಿರುಸು ಧ್ವನಿಯಲ್ಲಿ ವಾರ್ನಿಂಗ್ ಕೊಟ್ಟಿದ್ದರಂತೆ. ಆ ವಯಸ್ಸಿನಲ್ಲಿ ಎನ್.ಟಿ.ಆರ್ಗೆ ತಾನು ಮಾಡಿದ ತಪ್ಪೇನು ಎಂದು ಅರಿವಾಗಿರಲಿಲ್ಲ. ಬಳಿಕ ಅವರು ಪಶ್ಚಾತ್ತಾಪ ಪಟ್ಟಿದ್ದರು. ತಿಳುವಳಿಕೆ ಇಲ್ಲದ ವಯಸ್ಸಿನಲ್ಲಿ ಅಜಾಗರೂಕತೆಯಿಂದ ಹೇಳಿಕೆ ನೀಡಿದ್ದೆ ಎಂದು ಅವರು ಮಾಡಿದ ತಪ್ಪನ್ನ ಒಪ್ಪಿಕೊಂಡಿದ್ದರು. ಸಿಂಹಾದ್ರಿ ಬಳಿಕ ಎನ್.ಟಿ.ಆರ್ ಸತತ ಸೋಲುಗಳನ್ನು ಕಂಡರು. ಬಹಳ ನಿರೀಕ್ಷೆಯೊಂದಿಗೆ ಬಿಡುಗಡೆಯಾಗಿದ್ದ ಆಂಧ್ರಾವಾಲ ಚಿತ್ರ ಫ್ಲಾಪ್ ಆಗಿತ್ತು.
ಸಾಂಬ, ನಾ ಅಲ್ಲುಡು, ನರಸಿಂಹುಡು, ಅಶೋಕ್, ರಾಖಿ… ಒಂದೇ ಒಂದು ಚಿತ್ರ ಕೂಡ ಗೆದ್ದಿರಲಿಲ್ಲ. ನಂತರ ರಂಗಕ್ಕಿಳಿದ ರಾಜಮೌಳಿ ಯಮದೊಂಗ ಚಿತ್ರದ ಮೂಲಕ ಜೂ.ಎನ್ಟಿಆರ್ಗೆ ಬ್ರೇಕ್ ಕೊಟ್ಟರು. ಕಾಲಕ್ರಮೇಣ ಎನ್.ಟಿ.ಆರ್ ಪ್ರಬುದ್ಧರಾಗಿ ನಡೆದುಕೊಂಡರು. ಎನ್.ಟಿ.ಆರ್ ಮಾತುಗಳು ಬಹಳ ಪರಿಪಕ್ವತೆಯಿಂದ ಕೂಡಿರುತ್ತವೆ. ಯಾವುದೇ ವಿವಾದಕ್ಕೆ ಅವಕಾಶ ನೀಡದೆ ಅರ್ಥಪೂರ್ಣವಾಗಿ ಮಾತನಾಡುತ್ತಾರೆ. ವೇದಿಕೆಗಳ ಮೇಲೆ ನಿರರ್ಗಳವಾಗಿ ಮಾತನಾಡುತ್ತಾರೆ. ಅನುಭವಗಳಿಂದ ಎನ್.ಟಿ.ಆರ್ ಪಾಠ ಕಲಿತಿದ್ದಾರೆ.
ನಂದಮೂರಿ ಹರಿಕೃಷ್ಣ ಅಂದರೆ ನಾಗಾರ್ಜುನರಿಗೆ ಬಹಳ ಇಷ್ಟವಂತೆ. ಒಮ್ಮೆ ಎನ್.ಟಿ.ಆರ್ ‘ನೀವು ಯಾರು ಕೋಟ್ಯಾಧಿಪತಿ?’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ನಿರೂಪಕರಾಗಿದ್ದ ನಾಗಾರ್ಜುನ ಈ ವಿಷಯವನ್ನು ಎನ್.ಟಿ.ಆರ್ ಜೊತೆ ಹಂಚಿಕೊಂಡಿದ್ದರು. ಎನ್.ಟಿ.ಆರ್-ನಾಗ್ ನಡುವೆ ಉತ್ತಮ ಬಾಂಧವ್ಯವಿದೆ.