ಕಲಬುರುಗಿಯ ಕುರಿಕೋಟಾ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಮೃತ ದೇಹ ಪತ್ತೆಯಾಗಿದೆ. ಸಂಧ್ಯಾರಾಣಿ ಮೃತ ಯುವತಿ. ಜುಲೈ 15ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆಯಿಂದ ಯುವಕ ಹಾಗೂ ಯುವತಿ ಬಿದ್ದಿದ್ದರು.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ, ಈಜು ತಜ್ಞರು ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದರು. ನದಿಗೆ ಹಾರಿದ್ದ ಯುವಕ ಅನಿಲ ಕುಮಾರ್ ಮೃತದೇಹ ಅಂದೆ ಬೆಣ್ಣೆತೋರಾ ನದಿಯಲ್ಲಿ ಪತ್ತೆಯಾಗಿತ್ತು. ಇಂದು ಯುವತಿ ಸಂಧ್ಯಾರಾಣಿ ಶವ ಪತ್ತೆಯಾಗಿದೆ.
ಮೃತ ಸಂಧ್ಯಾರಾಣಿ ಕಲಬುರಗಿ ನಗರದ ಫಿಲ್ಟರ್ ಬೆಡ್ ನಿವಾಸಿ. ಸಂಧ್ಯಾರಾಣಿ ಮದುವೆಯಾಗಿ ಗಂಡನನ್ನ ತೊರೆದಿದ್ದಳಂತೆ. ಬಳಿಕ ಅನಿಲ ಕುಮಾರ್ ಎಂಬಾತನ ಜೊತೆ ಆತ್ಮೀಯತೆ ಹೆಚ್ಚಾಗಿ ಒಟ್ಟೊಟ್ಟಿಗೆ ಓಡಾಡುತ್ತಿದ್ದರಂತೆ. ಆದರೆ ಇಬ್ಬರು ಸಾಯುವ ಮುನ್ನ ಬ್ರಿಡ್ಜ್ ಮೇಲೆ ನಿಂತು ಕಿತ್ತಾಡಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಸದ್ಯ ಈ ಘಟನೆ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.