ಕಲಬುರಗಿ : ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು, ತಲ್ವಾರ್ ಕೊಡಿ ಎಂದು ಕಲಬುರಗಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಚೋದನಕಾರಿ ಭಾಷಣ ಹಿನ್ನಲೆ ಸ್ವಾಮೀಜಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಅಫಜಲಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ವಕ್ಫ್ ಹಠಾವೋ ದೇಶ ಬಚಾವೋ ಹೋರಾಟದಲ್ಲಿ ಅಫಜಲಪುರ ತಾಲ್ಲೂಕಿನ ಮಾಶಾಳದ ಗ್ರಾಮದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಸ್ವಾಮೀಜಿ ಪ್ರಚೋದನಕಾರಿ ಭಾಷಣ ಮಾಡಿ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇದನ್ನು ಓದಿ: ಒಮ್ಮೆ ಚಾರ್ಜ್ ಮಾಡಿದ್ರೆ 175 km ಮೈಲೇಜ್ ಕೊಡುವ ಹೊಸ ಎಲೆಕ್ಟ್ರಿಕ್ ಬೈಕ್!
ಭಾಷಣ ಮಾಡುವ ಭರದಲ್ಲಿ ಸ್ವಾಮೀಜಿ ಅಲ್ಪಸಂಖ್ಯಾತರು ಯಾರು ಬರುತ್ತಾರೊ ಅವರನ್ನು ಕಡಿಯುತ್ತೇವೆ ಎಂದು ಹೇಳುತ್ತಿದ್ದಾರೆ. ಭಾರತವನ್ನು, ಪಾಕಿಸ್ತಾನ ಮಾಡುತ್ತೇವೆ ಎಂದು ಹೊರಟ್ಟಿದ್ದಾರೆ. ಇನ್ನು ನಾವು ಎಚ್ಚೆತ್ತುಕೊಳ್ಳದೆ ಇದ್ದರೆ ಈ ದೇಶ ಇರೊದಿಲ್ಲ. ಆದ್ದರಿಂದ ಇನ್ನು ಮುಂದೆ ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡೋಣ, ವಕ್ಫ್ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು, ಜೀವ ಕೊಡಲು ಸಿದ್ದರಿದ್ದೇವೆ ಎಂದು ತೋರಿಸೋಣ ಎಂದು ಪೋಲಿಸರ ಮುಂದೆಯೆ ವಿವಾದಾತ್ಮಕವಾಗಿ ಸ್ವಾಮೀಜಿ ಭಾಷಣ ಮಾಡಿದರು.
ಇದನ್ನು ಓದಿ: ಮಹತ್ವದ ಪಂದ್ಯಕ್ಕೆ ಟೀಮ್ ಇಂಡಿಯಾಗೆ RCB ಸ್ಟಾರ್ ಎಂಟ್ರಿ!
ಅಫಜಲಪುರ ಪೊಲೀಸ್ ಠಾಣೆಯಲ್ಲಿಸ್ವಾಮೀಜಿಯ ಹೇಳಿಕೆ ಆಧಾರದ ಮೇಲೆ ಸ್ವಯಂಪ್ರೇರಿತ ದೂರು ದಾಖಲಾಗಿದ್ದು. ಭಾರತೀಯ ನ್ಯಾಯ ಸಂಹಿತೆಯ (BNS) ಕಾಯಿದೆಯ sec 299 ಮತ್ತು 353/2 ರಡಿಯಲ್ಲಿ ದೂರು ದಾಖಲು ಮಾಡಲಾಗಿದೆ.