ಒಂದು ಕಡೆ ಕನ್ನಡದ ಬಿಗ್ ರಿಯಾಲಿಟಿ ಶೋ 12ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಮತ್ತೊಂದು ಕಡೆ ತೆಲುಗಿನ ಬಿಗ್ಬಾಸ್ ಬಗ್ಗೆ ಬಿಗ್ ಅಪ್ಡೇಟ್ವೊಂದು ದೊರಕಿದೆ. ತೆಲುಗಿನ ಬಿಗ್ಬಾಸ್ ಸೀಸನ್- 8 ಗ್ರ್ಯಾಂಡ್ ಫಿನಾಲೆಗೆ ತಯಾರಿ ನಡೆಸಿಕೊಳ್ಳುತ್ತಿದೆ.. ತೆಲುಗು ಬಿಗ್ಬಾಸ್ ಸೀಸನ್ 8ಕ್ಕೆ ಒಟ್ಟು 14 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ನಾಲ್ವರು ಕನ್ನಡಿಗರೇ ಇದ್ದು. ಇದೀಗ ಟಾಪ್ 5 ಗೆ ಇಬ್ಬರು ಕನ್ನಡದ ನಟ-ನಟಿ ಪಾದಾರ್ಪಣೆ ಮಾಡಿದ್ದಾರೆ.
ಇದೀಗ ನಾಲ್ವರಲ್ಲಿ ಇಬ್ಬರು ಬಿಗ್ಬಾಸ್ ಸೀಸನ್ 8ರ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದಾರೆ. ನಿಖಿಲ್, ಅವಿನಾಶ್, ಪ್ರೇರಣಾ, ನಬೀಲ್ ಮತ್ತು ಗೌತಮ್ ಫೈನಲ್ಗೆ ತಲುಪಿದ್ದಾರೆ. ಟಿಕೆಟ್ ಟು ಫಿನಾಲೆ ಗೆದ್ದು ಅವಿನಾಶ್ ಟಾಪ್ ಐದರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಉಳಿದ ಸ್ಪರ್ಧಿಗಳನ್ನು ಪ್ರೇಕ್ಷಕರು ಪ್ರಶಸ್ತಿ ರೇಸ್ಗೆ ಮತ ಹಾಕಿದರು. ಅವರಲ್ಲಿ ಒಬ್ಬರು ಪ್ರಶಸ್ತಿ ವಿಜೇತರಾಗಲಿದ್ದಾರೆ. ಅಲ್ಲದೇ ಯಾವ ಸ್ಪರ್ಧಿಗೆ ಅತಿ ಹೆಚ್ಚಾಗಿ ಪ್ರೇಕ್ಷಕರ ಮನ ಗೆಲ್ಲುತ್ತಾರೆ ಅಂತ ಕಾದು ನೋಡಬೇಕಿದೆ. ಯಾವ ಸ್ಪರ್ಧಿಗೆ ಅತಿ ಹೆಚ್ಚು ವೋಟಿಂಗ್ ಬರುತ್ತದೆಯೇ ಅವರು ಈ ಬಾರಿಯ ವಿನ್ನರ್ ಆಗಿ ಹೊರಹೊಮ್ಮಲಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಜೋರು ಚರ್ಚೆಗಳು ಶುರುವಾಗಿವೆ. ಈ ಬಾರಿಯ ಬಿಗ್ಬಾಸ್ ಸೀಸನ್ 8ರಲ್ಲಿ ಕನ್ನಡದ ಇಬ್ಬರು ನಟ ಹಾಗೂ ನಟಿಯರು ಭಾಗಿಯಾಗಿದ್ದಾರೆ. ಇವರ ಪೈಕಿ ಈ ಬಾರಿಯ ವಿನ್ನರ್ ಆಗಿ ಕನ್ನಡದ ನಟ ಹಾಗೂ ನಟಿಯರು ಹೊರ ಹೊಮ್ಮುತ್ತಾರಾ ಅನ್ನುವುದು ಕಾದು ನೋಡಬೇಕಿದೆ.