‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಸುರೇಶ್ ಇರುವ ವಿಡಿಯೋ ಇದೀಗ ವೈರಲ್ ಆಗಿದೆ. ದೊಡ್ಮನೆಯಲ್ಲಿರುವಾಗಲೇ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹಿನ್ನೆಲೆ ಇದೀಗ ಅವರು ಆಪರೇಷನ್ಗೆ ಒಳಗಾಗಿದ್ದಾರೆ.
ಗೋಲ್ಡ್ ಸುರೇಶ್ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್ನಲ್ಲಿದ್ದಾಗ ಟಾಸ್ಕ್ ನಿರ್ವಹಿಸುವ ಸಮಯದಲ್ಲಿ ಗೋಲ್ಡ್ ಸುರೇಶ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಡ್ರಮ್ ತುಂಬಾ ನೀರು ತುಂಬಿಸಿ ಅದನ್ನು ಹೊರಚೆಲ್ಲದಂತೆ ನೋಡಿಕೊಳ್ಳುವ ಟಾಸ್ಕ್ನಲ್ಲಿ ಸುರೇಶ್ ಕಾಲಿಗೆ ಪೆಟ್ಟಾಗಿತ್ತು. ಅವರ ಕಾಲಿಗೆ ಡ್ರಮ್ ಬಿದ್ದಿತ್ತು. ಕಾಲು ಮುರಿದೇ ಹೋಯ್ತು ಎಂದು ಗೋಳಾಡಿದ್ದರು. ಸುರೇಶ್ ಅವರ ಈ ಸಂಕಟ ಕಂಡು ಮನೆಮಂದಿ ಕೂಡ ಗಾಬರಿ ಆಗಿದ್ದರು. ಬಳಿಕ ಅವರಿಗೆ ಬಿಗ್ ಬಾಸ್ ಟೀಮ್ ಚಿಕಿತ್ಸೆ ನೀಡಿದ್ದರು.
ಬಳಿಕ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎಂದು ದೊಡ್ಮನೆಯಿಂದ ಸುರೇಶ್ ಹೊರಬಂದಿದ್ದರು. ಆದರೆ ಈಗ ಅಂದು ಆಗಿರುವ ಗಾಯ ಉಲ್ಭಣಗೊಂಡಿದೆ. ಹಾಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆವೊಂದರಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು (ಫೆ.3) ಬೆಳಗ್ಗೆ ಸುರೇಶ್ಗೆ ಆಪರೇಷನ್ ಮಾಡಲಾಗಿದೆ. ಆತಂಕಪಡುವ ಅಗತ್ಯವಿಲ್ಲ.
ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, 3 ದಿನಗಳ ಬಳಿಕ ಸುರೇಶ್ ಡಿಸ್ಚಾರ್ಜ್ ಆಗಲಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಗೋಲ್ಡ್ ಸುರೇಶ್ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc