ಪ್ರತೀ ವರ್ಷ ಸ್ಯಾಂಡಲ್ ವುಡ್ ನಿಂದ ಕನಿಷ್ಟ 200 ಸಿನಿಮಾಗಳು ನಿರ್ಮಾಣ ಆಗ್ತಿವೆ. ಆದ್ರೆ ಅವುಗಳ ಸಕ್ಸಸ್ ರೇಟ್ ನೋಡಿದ್ರೆ 10%ಗಿಂತ ಕಮ್ಮಿ ಇರುತ್ತೆ. 2024ರಲ್ಲಿ ಕೂಡ 210ಕ್ಕೂ ಅಧಿಕ ಚಿತ್ರಗಳು ತೆರೆಕಂಡಿವೆ. ಆದ್ರೆ ಜನವರಿ ಒಂದರಿಂದ ಡಿಸೆಂಬರ್ ವರೆಗೂ ಸಿಗದ ಸಕ್ಸಸ್, ವರ್ಷಾಂತ್ಯದ ಡಿಸೆಂಬರ್ ಮಾಸದಲ್ಲಿ ಸಿಗುತ್ತೆ. ಈ ವರ್ಷ ಕೂಡ ಉಪೇಂದ್ರ ಅವರ ಯುಐ ಹಾಗೂ ಸುದೀಪ್ ನಟನೆಯ ಮ್ಯಾಕ್ಸ್ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಬ್ಯಾಂಗ್ ಮಾಡ್ತಿವೆ. ಅಂದಹಾಗೆ ಡಿಸೆಂಬರ್ ತಿಂಗಳು ಅಕ್ಷರಶಃ ಲಕ್ಕಿ ಮಂಥ್ ಅನ್ನೋದ್ರಲ್ಲಿ ಸಂದೇಹವೇ ಇಲ್ಲ.
ಡಿಸೆಂಬರ್ ಕೊನೆಯಲ್ಲಿ ತೆರೆಕಂಡ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ವೆ ಅನ್ನೋದಕ್ಕೆ ದೊಡ್ಡ ಇತಿಹಾಸವೇ ಇದೆ. ಹೌದು.. ಇದು ಕಳೆದ ವರ್ಷ ಅಥವಾ ಈ ವರ್ಷದ ಕಥೆಯಲ್ಲ. ಬರೋಬ್ಬರಿ ಇಪ್ಪತ್ತು ವರ್ಷಗಳಿಂದ ಡಿಸೆಂಬರ್ ನಲ್ಲಿ ರಿಲೀಸ್ ಆದ ಕನ್ನಡದ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಹಿಟ್ ಆಗ್ತಿವೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿವೆ. 2000ನೇ ಇಸವಿಯಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಯಜಮಾನ ಚಿತ್ರದಿಂದ ಹಿಡಿದು, 2024ರ ಕಿಚ್ಚ ಸುದೀಪ್ ರ ಮ್ಯಾಕ್ಸ್ ವರೆಗಿನ ಕಂಪ್ಲೀಟ್ ರೌಂಡಪ್ ಇಲ್ಲಿದೆ ನೋಡಿ.
ಡಿಸೆಂಬರ್ನಲ್ಲಿ ತೆರೆ ಕಂಡ ಕನ್ನಡ ಚಿತ್ರಗಳ ಪಟ್ಟಿ..
- ಯಜಮಾನ- ಡಿಸೆಂಬರ್ 1- 2000
- ಕೋತಿಗಳು ಸಾರ್ ಕೋತಿಗಳು- ಡಿಸೆಂಬರ್ 28 – 2001
- ನಂದಿ- ಡಿಸೆಂಬರ್ 27- 2002
- ಎಕ್ಸ್ ಕ್ಯೂಸ್ ಮೀ- ಡಿಸೆಂಬರ್ 6- 2003
- ರಾಮ ಶಾಮ ಭಾಮ- ಡಿಸೆಂಬರ್ 9- 2005
- ಮುಂಗಾರುಮಳೆ- ಡಿಸೆಂಬರ್ 29- 2006
- ರಾಮ್- ಡಿಸೆಂಬರ್ 25- 2009
- ಸೂಪರ್- ಡಿಸೆಂಬರ್ 3- 2010
- ವಿಷ್ಣುವರ್ಧನ- ಡಿಸೆಂಬರ್ 8- 2011
- ಭಜರಂಗಿ- ಡಿಸೆಂಬರ್ 12- 2013
- ಶ್ರಾವಣಿ ಸುಬ್ರಮಣ್ಯ- ಡಿಸೆಂಬರ್ 27-2013
- Mr & Mrs ರಾಮಾಚಾರಿ- ಡಿಸೆಂಬರ್ 12- 2014
- ರಥಾವರ- ಡಿಸೆಂಬರ್ 4- 2015
- ಮಾಸ್ಟರ್ ಪೀಸ್- ಡಿಸೆಂಬರ್ 24- 2015
- ಕಿರಿಕ್ ಪಾರ್ಟಿ- ಡಿಸೆಂಬರ್ 30- 2016
- ಮಫ್ತಿ- ಡಿಸೆಂಬರ್ 1- 2017
- ಚಮಕ್- ಡಿಸೆಂಬರ್ 29- 2017
- KGF ಚಾಪ್ಟರ್1- ಡಿಸೆಂಬರ್ 21- 2018
- ಅವನೇ ಶ್ರೀಮನ್ನಾರಾಯಣ- ಡಿಸೆಂಬರ್ 27- 2019
- ವೇದ- ಡಿಸೆಂಬರ್ 23- 2022
- ಕಾಟೇರ- ಡಿಸೆಂಬರ್ 29- 2023
- UI- ಡಿಸೆಂಬರ್ 20- 2024
- ಮ್ಯಾಕ್ಸ್- ಡಿಸೆಂಬರ್ 25- 2024
ಹೀಗಾಗಿ ಡಿಸೆಂಬರ್ ತಿಂಗಳಲ್ಲಿ ತೆರೆ ಕಂಡ ಕನ್ನಡ ಚಲನಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ. ಕನ್ನಡ ಚಿತ್ರರಂಗಕ್ಕೆ ಡಿಸೆಂಬರ್ ತಿಂಗಳೂ ನಿಜಕ್ಕೂ ಲಕ್ಕಿ.