ಚೈತ್ರಾ ಕುಂದಾಪುರ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇತ್ತೀಚೆಗೆ ಅವರಿಗೆ ಅನಾರೋಗ್ಯ ಆಗಿದ್ದರಿಂದ ಅವರು ಆಸ್ಪತ್ರೆಗೆ ಹೋಗಿ ಬಂದಿದ್ದರು. ಹೊರಹೋಗಿ ಬಂದ ಅವರು ಎಲ್ಲಾ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಆಡಬೇಕು ಎಂಬುದರ ಹಿಂಟ್ ಕೊಟ್ಟಿದ್ದರು. ಇದು ಹೊರಗಿನ ಅಭಿಪ್ರಾಯ ಎಂದು ಕೂಡ ಹೇಳಿದ್ದರು. ಇದರಿಂದ ಸುದೀಪ್ ಸಖತ್ ಸಿಟ್ಟಾಗಿದ್ದಾರೆ. ಅಲ್ಲದೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಂತರ ಚೈತ್ರಾ ಕ್ಷಮೆ ಕೇಳಿದರು. ಈ ಕ್ಷಮೆಯನ್ನು ಸುದೀಪ್ ಅವರು ಒಪ್ಪಿಲ್ಲ. ‘ನಾನು ತಲೆಕೆಟ್ ನನ್ಮಗ’ ಎಂದಿದ್ದಾರೆ ಸುದೀಪ್.
ಸುದೀಪ್ ಅವರು ಪ್ರತಿ ಶನಿವಾರ ಒಂದಷ್ಟು ಜನರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಲಿಮಿಟ್ ದಾಟಿ ಹೋಗಿದ್ದು ಕಡಿಮೆ. ಆದರೆ, ಈ ವಾರ ಮಾತ್ರ ಅವರು ಮಿತಿ ಮೀರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಚೈತ್ರಾ ಶಾಕ್ ಆಗಿದ್ದಾರೆ. ಅವರಿಗೆ ಏನು ಹೇಳಬೇಕು ಎಂದೇ ಗೊತ್ತಾಗಲೇ ಇಲ್ಲ. ಕಣ್ಣಿನ ತುಂಬ ನೀರು ತುಂಬಿಕೊಂಡು ಮಾತನಾಡಲು ತಡಬಡಿಸಿದ್ದಾರೆ.
ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಸುದೀಪ್ ಅವರಿಗೇ ಬೇಸರ ಆಯಿತು. ಈ ಕಾರಣಕ್ಕೆ ಅವರು ಚೈತ್ರಾ ಬಳಿ ಕ್ಷಮೆ ಕೇಳಿದರು. ಆದರೆ, ಈ ಕ್ಷಮೆಗೆ ಚೈತ್ರಾ ಅವರು ಸ್ವಲ್ಪವೂ ಗಮನ ಕೊಡಲೇ ಇಲ್ಲ. ಇದಕ್ಕೆ ಸುದೀಪ್ ಬೇಸರ ಮಾಡಿಕೊಂಡರು. ಈ ಬಗ್ಗೆ ನೇರವಾಗಿ ಹೇಳಿದರು.
ತಪ್ಪಿನ ಅರಿವಾದ ಬಳಿಕ ಚೈತ್ರಾ ಅವರ ಕಡೆಯಿಂದಲೇ ಕ್ಷಮೆ ಬಂತು. ‘ನಾನು ಕ್ಷಮೆ ಕೇಳಿದಾಗ ನೀವು ಸ್ಪಂದಿಸಿಲ್ಲ. ಹೀಗಿರುವಾಗ ನಿಮ್ಮ ಕ್ಷಮೆಗೆ ನಾನೇಕೆ ಸ್ಪಂದಿಸಲಿ? ಅಯ್ಯೋ ನಾನು ತಲೆ ಕೆಟ್ ನನ್ನ ಮಗ. ಹುಚ್ಚ ಇಂದ ಕರಿಯರ್ ಶುರು ಮಾಡಿದವನು ನಾನು. 28 ವರ್ಷ ಅದರಲ್ಲೇ ಬದುಕಿದೀನಿ. ನಾನು ಕ್ಷಮೆ ಕೇಳಿದಾಗ ಸ್ಪಂದಿಸಿದರೆ ಒಳ್ಳೆ ಮನುಷ್ಯ. ಇಲ್ಲ ಎಂದರೆ ನನ್ನಂತ ತಲೆಕೆಟ್ಟವರು ಯಾರೂ ಇಲ್ಲ’ ಎಂದಿದ್ದಾರೆ ಸುದೀಪ್.
ನಂತರ ಚೈತ್ರಾ ಅವರು ಕ್ಯಾಮೆರಾ ಬಳಿ ಹೋಗಿ ‘ವಾತಾವರಣ ಉಸಿರುಗಟ್ಟಿಸುತ್ತಿದೆ. ನಾನು ಮನೆಯಿಂದ ಹೊರ ಹೋಗಬೇಕು. ನನ್ನ ಕಳುಹಿಸಿ’ ಎಂದು ಅವರು ಹೇಳಿದರು. ಇದಕ್ಕೆ ಬಿಗ್ ಬಾಸ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.