ಕಲರ್ಸ್ ಕನ್ನಡ ವಾಹಿನಿಯ ನಂ.೧ ಸೀರಿಯಲ್ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಕಳೆದ ಒಂದು ವಾರದಿಂದ ಮೇಜರ್ ಟ್ವಿಸ್ಟ್ಗಳ ಸುರಿಂಲೆಯೇ ಆಘ್ತಾ ಇದ್ದು, ಇವತ್ತಿನ ಎಪಿಸೋಡ್ನಲ್ಲಿ ವೀಕ್ಷಕರು ನಿರೀಕ್ಷೇ ಮಾಡ್ತಾಇದ್ದ ಬಿಗ್ ಟ್ವಿಸ್ಟ್ ಬರ್ತಾ ಇದೆ. ಭಾಗ್ಯಲಕ್ಷ್ಮಿ ನಾಯಕಿ ಭಾಗ್ಯ ತನ್ನ ಬದುಕಿನ ಅತಿದೊಡ್ಡ ಡಿಸಿಷನ್ ತಗೋತಾ ಇದ್ದಾಳೆ..!
ಭಾಗ್ಯಲಕ್ಷ್ಮಿ ಸೀರಿಯಲ್ ಅಭಿಮಾನಿಗಳ ನಿರೀಕ್ಷೆಯಂತೆ ಭಾಗ್ಯ ತನ್ನ ಬದುಕಿನಲ್ಲಿ ಮಹಾ ನಿರ್ಧಾರ ತೆಗೆದುಕೊಳ್ತಿದ್ದಾಳೆ. ನನ್ನ ಬಗ್ಗೆ ಪ್ರೀತಿನೇ ಇಲ್ಲದಿರೋರು ಇದ್ದರೆಷ್ಟು, ಹೋದರೆಷ್ಟು ಎಂದು, ತಾಂಡವ್ ಮುಖಕ್ಕೆ ಡಿವೋರ್ಸ್ ಪೇಪರ್ಸ್ ಎಸೆದಿದ್ದಾಳೆ ಭಾಗ್ಯ! ಭಾಗ್ಯಳ ಈ ದಿಟ್ಟ ಹೆಜ್ಜೆ ಇಂದಿನ ಎಪಿಸೋಡ್ನಲ್ಲಿ ಪ್ರಸಾರವಾಗಲಿದೆ.
ತಾಂಡವ್ ಹಾಗೂ ಶ್ರೇಷ್ಠ ಪ್ರೀತಿ ವಿಷ್ಯ ಭಾಗ್ಯಾಗೆ ತಿಳಿದಾಗಿನಿಂದ ಸೀರಿಯಲ್ ಗೆ ಸಾಕಷ್ಟು ತಿರುವು ಕಂಡಿದ್ದು ತಾಂಡವ್ ಮನೆ ಬಿಟ್ಟು ಬಂದಿದ್ದಲ್ಲದೆ ತನ್ನ ಜೊತೆ ಅತ್ತೆ- ಮಾವ, ಮಕ್ಕಳನ್ನು ತವರಿಗೆ ಕರೆತಂದಿದ್ದಳು. ಭಾಗ್ಯ ಮಗಳು ತನ್ವಿ ಜಗಳವಾಡಿ, ಕಾಲೇಜ್ ಇಂದ ಸಸ್ಪೆಂಡ್ ಆದಳು. ಶ್ರೇಷ್ಠಾ ಮನೆಗೆ ಬಂದು ರಾದ್ಧಾಂತ ಮಾಡಿದ್ದಳು. ತಾಂಡವ್, ಮಕ್ಕಳನ್ನು ತನ್ನ ಮನೆಗೆ ಕಳುಹಿಸುವಂತೆ ಒತ್ತಡ ಹೇರಿದ್ದಳು.
ಇದಲ್ಲದೆ ಈಗ ಅಮ್ಮ ಸುನಂದಾ ಶ್ರೇಷ್ಠ ಮೇಲೆ ಕೊಲೆ ಪ್ರಯತ್ನ ಮಾಡಿ, ಪೊಲೀಸ್ ಸ್ಟೇಷನ್ ಲಿ ಲಾಕ್ ಆಗಿದ್ದಾಳೆ. ಅಮ್ಮನನ್ನು ಬಿಡಿಸಲು ಪೊಲೀಸ್ ಬಳಿ, ಭಾಗ್ಯ ಮನವಿ ಮಾಡುತ್ತಲೇ ಇದ್ದಾಳೆ . ಇದೆ ಸಂಧರ್ಭವನ್ನು ಉಪಯೋಗಿಸಿಕೊಂಡು, ತಾಂಡವ್, ಸುನಂದಳ ನ್ನು ಬಿಡಿಸುವುದಾಗಿ ಹೇಳಿ, ಒಂದು ಕಂಡೀಶನ್ ಹಾಕಲು ಮುಂದಾಗುತ್ತಾನೆ. ಆಗ ಕಂಡೀಶನ್ ಒಪ್ಪಿಕೊಳ್ಳೋದಿರಲಿ, ತಾಂಡವ್ ಮಾತು ಕೇಳುವುದಕ್ಕೂ ನಾನು ರೆಡಿ ಇಲ್ಲ ಎಂದು, ಭಾಗ್ಯ ಸವಾಲು ಹಾಕಿದ್ದಾಳೆ.
ಇದೆ ವೇಳೆ ಭಾಗ್ಯ ‘ನನ್ನ ಬಗ್ಗೆ ಪ್ರೀತಿನೇ ಇಲ್ಲದಿರೋರು ಇದ್ದರೆಷ್ಟು, ಹೋದರೆಷ್ಟು’ ಅಂತ ಭಾವಿಸಿ ತಾಂಡವ್ ಜೊತೆಗಿನ ಸಂಬಂಧಕ್ಕೆ ಮುಕ್ತಿ ಹಾಡಲು ಹೊರಟಿದ್ದಾಳೆ. ತಾಂಡವ್ ಮುಖಕ್ಕೆ ಡಿವೋರ್ಸ್ ಪೇಪರ್ ಎಸೆದಿದ್ದಾಳೆ. ಮುಂದೇನಾಗುತ್ತೆ ಅಂತ ನೋಡೋದಕ್ಕೆ ಇವತ್ತಿನ ಎಪಿಸೋಡ್ನ ಮಿಸ್ ಮಾಡ್ದೇ ನೋಡಿ.