ದೊಡ್ಡಬಳ್ಳಾಪುರ: ಆತ ರಿಯಲ್ ಎಸ್ಟೇ ಟ್ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡಿ ಬಂದ ಕಮಿಷನ್ ಹಣದಲ್ಲಿ ಬಿಂದಾಸ್ ಜೀವನಕಟ್ಟಿಕೊಂಡಿದ್ದ. ಜೊತೆಗೆ ಸ್ನೇಹಿತ ಅಂತ ವ್ಯಾಪಾರದ ಜೊತೆಗೆ ಮನೆಯಲ್ಲು ಜಾಗ ನೀಡಿದ್ದು ಕಷ್ಟಾ ಅಂದಾಗ ಹಣಕಾಸಿನ ನೆರವು ಸಹ ನೀಡಿದ್ದ. ಆದ್ರೆ ಅದೇ ಹಣಕಾಸಿನ ನೆರವು ಇದೀಗ ಆತನಿಗೆ ಮುಳುವಾಗಿದ್ದು ಸ್ನೇಹಿತ ಅಂತ ನಂಬಿದಕ್ಕೆ ಪರಲೋಕಕ್ಕೆ ಪಾರ್ಸಲ್ ಆಗಿಬಿಟ್ಟಿದ್ದಾನೆ.
ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ. ಅಲ್ಲಿನ ಬಡಾವಣೆಯ ಮಣ್ಣಿನಲ್ಲಿ ಪೊಲೀಸರು ಇಂಚಿಂಚೂ ಶೋಧ ನಡೆಸುತ್ತಿದ್ದರೆ, ಇತ್ತ ಕೆರೆ ನೀರು ಏರಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ ಪೊಲೀಸರಿಗೆ ಚೀಲದ ಮೂಟೆಯೊಂದು ಸಿಕ್ಕಿದೆ. ಮೂಟೆಯಲ್ಲಿ ಏನಿದೆ ಅಂತ ಕುತೂಹಲದಿಂದ ನೋಡಿದವರಿಗೆ ಕಾಣಿಸಿದ್ದು ಎರಡು ತಿಂಗಳ ಹಿಂದೆ ಕೊಳೆತು ಅರೆ ಬರೆ ಬೆಂದಿರುವ ಮೃತದೇಹದ ಅಂಗಾಂಗಗಳು, ಈ ರೀತಿ ಕ್ರೂರವಾಗಿ ಕೊಲೆಯಾಗಿರುವವರ ಹೆಸರು ದೇವರಾಜ್.
ರಿಯಲ್ ಎಸ್ಟೇಟ್ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರು ಮಾರಟ ಮಾಡುತ್ತಿದ್ದ , ಕಮಿಷನ್ ಬಂದ ಹಣದಲ್ಲಿ ದೇವರಾಜ್ ಜೀವನ ಕಟ್ಟಿಕೊಂಡಿದ್ದ . ಸ್ನೇಹಿತನಿಗೂ ವ್ಯಾಪಾರದ ಜೊತೆಗೆ ಮನೆಯಲ್ಲೂ ಜಾಗ ನೀಡಿದ್ದ . ಕಷ್ಟದಲ್ಲಿ ಹಣಕಾಸಿನ ಸಹಾಯ ಕೂಡ ಮಾಡಿದ್ದ. ಆದರೆ ಆದೇ ಹಣಕಾಸಿನ ನೆರವೇ ಆತನಿಗೆ ಮುಳುವಾಗಿದ್ದು , ಸ್ನೇಹಿತನೆಂದು ನಂಬಿದ್ದಕೆ ಪರಲೋಕ ತ್ಯಜಿಸುವಂತಾಗಿದೆ . ಸಿನಿಮಾ ರೀತಿ ಕೊಲೆ ಪ್ರಕರಣ ನಡೆದಿದೆ. ಜೊತೆಯಲ್ಲೆ ಊಟಮಾಡಿ , ಕಷ್ಟ ಸುಖ ಎಲ್ಲವನ್ನು ಒಟ್ಟಿಗೆ ಹಂಚಿಕೊಂಡಿದ್ದಕೆ, ಲಕ್ಷ ಲಕ್ಷ ಹಣ ಕೊಟ್ಟಿದ್ದ ಸ್ನೇಹಿತನನ್ನೇ ಸಿನಿಮಾ ರೀತಿ ಹತ್ಯೆ ಮಾಡಿದ್ದಾನೆ ಈ ದ್ರೋಹಿ ಗೆಳೆಯ ಕೊಲೆ ಮಾಡಿರುವನನ್ನು ಈಗಾಗಲೇ ಪೊಲೀಸರು ಬಲೆಗೆ ಕೆಡವಿದ್ದಾರೆ ರಾಜ್ ಕುಮಾರ್ ಮತ್ತು ಅನಿಲ್ ಎಂಬುವರನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ನಿವಾಸಿಯಾಗಿದ ರಾಜ್ ಕುಮಾರ್ ಎಂಬವರು ಪಕ್ಕದ ಗ್ರಾಮದ ದೇವರಾಜ್ ಜೊತೆ ಸೇರಿ ರಿಯಲ್ ಎಸ್ಟೇಟ್ ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ದೆಹಲಿಯಿಂದ ತಂದು ಇಲ್ಲಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಇಬ್ಬರೂ ಜೊತೆಯಾಗಿಯೇ ವ್ಯವಹಾರ ಮಾಡುತ್ತಿದ್ದರು. ಅಂತಾರಾಜ್ಯ ವಾಹನಗಳನ್ನು ತಂದು ಮಾರಾಟ ಮಾಡಿ ಬಂದ ಲಾಭದ ಹಣವನ್ನ ಹಂಚಿಕೊಳ್ಳುತ್ತಿದ್ದರು. ಹೀಗಾಗಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಸ್ನೇಹಿತ ರಾಜ್ ಕುಮಾರ್ಗೆ ದೇವರಾಜ್ ನಂಬಿಕೆ ಮೇಲೆ ಕೊಟ್ಟಿದ್ದರು. ತಿಂಗಳುಗಳಿಂದ ಕೊಟ್ಟ ಹಣವನ್ನ ವಾಪಸ್ ಕೇಳಿದ್ದರಂತೆ. ಪದೇ ಪದೇ ಹಣ ಕೇಳಿದ್ದಕ್ಕೆ ರೊಚಿಗೆದ್ದ ರಾಜ್ ಕುಮಾರ್ ದೇವರಾಜ್ನನ್ನು ಕೊಲೆ ಮಾಡುವ ಸ್ಕೇಚ್ ಹಾಕಿದ್ದಾನೆ .ಅದಕ್ಕಾಗಿ ಆಂಧ್ರ ಮೂಲದ ಅನಿಲ್ ಎಂಬ ಸ್ನೇಹಿತನನ್ನ ಕರೆಸಿಕೊಂಡಿದನ್ನು ಯುಪಿ ರಿಜಿಸ್ಟರ್ ಮೂಲದ ಕಾರಿನಲ್ಲಿ ಅಕ್ಟೋಬರ್ 17 ರಂದು ಹಣ ನೀಡುವುದಾಗಿ ಕರೆದುಕೊಂಡು ಹೋಗಿದ್ದಾನೆ.
ಈ ವೇಳೆ ಸ್ನೇಹಿತನ ಸಂಚು ತಿಳಿಯದೆ ಕಾರು ಹತ್ತಿದ ದೇವರಾಜ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಇದೇ ವೇಳೆ, ಕಾರಿನಲ್ಲಿ ಮುಂದೆ ಕುಳಿತಿದ್ದ ದೇವರಾಜ್ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಅನಿಲ್ ಕೊಲೆ ಮಾಡಿದ್ದಾನೆ.ಶವವನ್ನು ಗುಂಡಿಯಲ್ಲಿ ಹೂಳಲು ಮೊದಲೇ ನಡೆದಿತ್ತು ಪ್ಲ್ಯಾನ್ ,ದೇವರಾಜ್ನನ್ನು ಕೊಲೆ ಮಾಡುವ ಮುನ್ನವೇ ಖಾಸಗಿ ಬಡಾವಣೆಯಲ್ಲಿ ಸಂಪು ಕಟ್ಟಬೇಕು ಎಂಬ ನೆಪದಲ್ಲಿ ರಾಜ್ಕುಮಾರ್ ಜೆಸಿಬಿ ಮೂಲಕ ಗುಂಡಿ ತೆಗೆಸಿದ್ದ. ನಂತರ ಅದೇ ಗುಂಡಿಯಲ್ಲಿ ದೇವರಾಜ್ ಮೃತದೇಹವನ್ನು ಹಾಕಿ ಮಣ್ಣು ಮುಚ್ಚಿದ್ದಾರೆ.ಕೆಲವು ತಿಂಗಳ ಬಳಿಕ ಶವವನ್ನು ಗುಂಡಿಯಿಂದ ತೇಗೆದು ಸುಟ್ಟಿದ್ದ . ಹೂತಿದ್ದ ಹೆಣ ಸಿಗಬಾರದು ಎಂದು ಕೊಲೆಯಾದ ಒಂದು ತಿಂಗಳ ಬಳಿಕ ಅದನ್ನು ಗುಂಡಿಯಿಂದ ತೆಗೆದು ಪೆಟ್ರೋಲ್ ಹಾಕಿ ಸುಟ್ಟಿದ್ದ. ಸುಟ್ಟ ನಂತರ ಬೂದಿ ಸಮೇತ ಕೆರೆಗೆ ಹಾಕಿದ್ದಾಗಿ ವಿಚಾರಣೆ ವೇಳೆ ಹೇಳಿದ್ದು, ಕೆರೆಗೆ ಹಾಕಿದ್ದ ಮೃತದೇಹದ ಮೂಳೆಗಳನ್ನು ಹೊರ ತೆಗೆಯಲಾಗಿದೆ. ಇದೀಗ, ದೃಶ್ಯಂ ಸಿನಿಮಾ ಸ್ಟೈಲ್ನಲ್ಲಿ ಕಥೆ ಕಟ್ಟಲು ಮುಂದಾಗಿದ್ದವನ ಬಂಧನವಾಗಿದೆ.
ಹೀಗಾಗಿ ಎಲ್ಲಾ ಅಯಾಮದಲ್ಲು ತನಿಖೆ ನಡೆಸಿದ ಇನ್ಸಪೇಕ್ಟರ್ ಸಾಧಿಕ್ ಪಾಷಗೆ ಮೊದಲಿಗೆ ನಾಪತ್ತೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗೆ ಬೇರೆ ಆಯಾಮಾದಲ್ಲಿ ತನಿಖೆಗಿಳಿದ ಪೊಲೀಸರಿಗೆ ರಾಜ್ ಕುಮಾರ್ ಮೇಲೆ ಅನುಮಾನ ಮೂಡಿದ್ದು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ 20 ಲಕ್ಷ ಸಾಲ ನೀಡಿದ್ದ ಹಣಕ್ಕಾಗಿ ದೇವರಾಜ್ ಪದೇ ಪದೆ ಕೇಳ್ತಿದ್ದ ಕಾರಣ ಸ್ನೇಹಿತ ಅನಿಲ್ ಜೊತೆಗೂಡಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.