ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್ ಸೇವೆ ಆರಂಭವಾಗಲಿದೆ. ಸಿಸಿಟಿವಿ ಮತ್ತು ಜಿಪಿಎಸ್ ವ್ಯವಸ್ಥೆ ಹೊಂದಿರುವ ಈ ಕ್ಯಾಬ್ 5 ರಿಂದ 16 ವರ್ಷದ ಮಕ್ಕಳಿಗೆ ಅನುಕೂಲಕರವಾಗಿದೆ ಎಂದು ಹೇಳಲಾಗಿದೆ. ಆದರೆ, ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದ್ದು, ಸರ್ಕಾರ ಇದನ್ನು ಪರಿಗಣಿಸಬೇಕಾಗಿದೆ. ಕ್ಯಾಬ್ನಲ್ಲಿ ಸುರಕ್ಷತಾ ಕ್ರಮಗಳು ಸಾಕಷ್ಟಿವೆಯೇ ಎಂಬುದು ಪ್ರಶ್ನಾರ್ಹವಾಗಿದೆ.
ಇನ್ನು, ಬೆಂಗಳೂರಿನ ಬ್ಯುಸಿ ಲೈಫ್ನಲ್ಲಿ ಮಕ್ಕಳನ್ನ ಶಾಲೆಗೆ ಕಳಿಸೋದು, ಶಾಲೆಯಿಂದ ಕರೆದುಕೊಂಡು ಬರೋದು ಪೋಷಕರಿಗೊಂದು ದೊಡ್ಡ ಟೆನ್ಷನ್. ಟೂಷನ್, ಡ್ಯಾನ್ಸ್ ಕ್ಲಾಸ್, ಸ್ಪೋರ್ಟ್ಸ್ ಟ್ರೈನಿಂಗ್ ಅಂತ ಏನಾದ್ರು ಇದ್ರೆ ಅವ್ರನ್ನ ಡ್ರಾಪ್ ಮಾಡಿ ಮತ್ತೆ ಪಿಕಪ್ ಮಾಡೋದಂತು ಇನ್ನೂ ಕಷ್ಟ. ಅಪಘಾತದಂತ ಘಟನೆಗಳಿಂದ ಪೋಷಕರಿಗೂ ಚಿಂತೆ ಜಾಸ್ತಿಯಾಗಿದೆ. ಪೋಷಕರ ಚಿಂತೆ ದೂರ ಮಾಡೋಕೆ ಮೆಟ್ರೋ ರೈಡ್ ಸಂಸ್ಥೆ ಮಕ್ಕಳಿಗಾಗಿ ಸ್ಪೆಷಲ್ ಕ್ಯಾಬ್ ಲಾಂಚ್ ಮಾಡ್ತಿದೆ.
ಮೆಟ್ರೋ ರೈಡ್ ಕಂಪನಿ ಮಕ್ಕಳಿಗಾಗಿ ವಿಶೇಷ ಕ್ಯಾಬ್ಗಳನ್ನ ಪರಿಚಯ ಮಾಡ್ತಿದೆ. ಈಗಾಗಲೇ ಹೈದರಾಬಾದ್ನಲ್ಲಿ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್ಗಳು ಕಾರ್ಯನಿರ್ವಹಿಸುತ್ತಿವೆ. ಅದೇ ಮಾದರಿಯಲ್ಲೀಗ ಬೆಂಗಳೂರಿನಲ್ಲೂ ಪರಿಚಯ ಮಾಡೋಕೆ ಕಂಪನಿ ಮುಂದಾಗಿದೆ.
ಇನ್ನೂ ಈಗಾಗಲೇ ಸರ್ಕಾರ ಕೂಡ ಶಾಲಾ ಬಸ್ಗಳಿಗೆ ಜಿಪಿಎಸ್, ಸಿಸಿಟಿವಿ ಅಳವಡಿಕೆ ಜೊತೆಗೆ ಚಾಲಕ ಕುಡಿಯಬಾರದು ಎನ್ನುವ ಆದೇಶ ಇದೆ. ಆದರೂ ಕೂಡ ಚಾಲಕರು ಕುಡಿದು ಚಾಲನೆ ಮಾಡುವ ಘಟನೆಗಳು ಕಂಡು ಬರುತ್ತಿವೆ. ಹೀಗಿಗಾಗಿ ಖಾಸಗಿ ಕಂಪನಿಯೊಂದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೊಸದಾಗಿ ಮೆಟ್ರೊ ಕಿಡ್ಸ್ ಕ್ಯಾಬ್ ಬೆಂಗಳೂರಿಗೆ ಪರಿಚಯಿಸುತ್ತಿದೆ.
ಆದರೆ, ಈ ಕ್ಯಾಬ್ ಗಂಡು ಮಕ್ಕಳಿಗೆ ಒಕೆ ಆದರೆ ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಇದು ಬೇಡ ಎಂದು ಮಕ್ಕಳ ಪೋಷಕರು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಮಕ್ಕಳ ಸುರಕ್ಷತೆ ವಿಚಾರವಾಗಿ ಮೆಟ್ರೊ ಕಿಡ್ಸ್ ಕ್ಯಾಬ್ ಬೆಂಗಳೂರಿಗೆ ದಾಪುಗಾಲು ಇಡಲು ಮುಂದಾಗಿದೆ. ಆದರೆ 10 ರಿಂದ 16 ವರ್ಷದ ಹೆಣ್ಣು ಮಕ್ಕಳಿಗೆ ಮನ ವಿಚಲಿತ ಆಗುವ ಸಂಭವ ಹೆಚ್ಚಾಗಿದ್ದು, ಈ ಅಂಶಗಳನ್ನ ಪರಿಗಣನೆಗೆ ತಗೆದುಕೊಂಡು ಸರ್ಕಾರ ಕ್ಯಾಬ್ಗೆ ಪರ್ಮಿಷನ್ ಕೊಡಬೇಕು ಅನ್ನೋದು ಜನರ ಆಶಯ.