ರಾಜ್ಯದಲ್ಲಿ ಉಪಚುನಾವಣೆಯ ಕದನ ರಂಗೇರಿದೆ, ಈ ವೇಳೆ ರಾಜ್ಯ ಬಿಜೆಪಿಯಿಂದ ಉಸ್ತುವಾರಿಗಳನ್ನು ನೇಮಿಸಿ ಕದನಕ್ಕೆ ಮುನ್ನುಡಿ ಬರೆದಿದೆ.
ಚನ್ನಪಟ್ಟಣದ ವಿಧಾನಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರನ್ನು ನೇಮಿಸಿದರೆ, ಶಿಗ್ಗಾಂವಿಗೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್, ಸಂಡೂರಿ ವಿಧಾನಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ರವರ ಹೆಗಲಿಗೆ ವಹಿಸಿದರೆ, ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಎಲೆಕ್ಷನ್ ಜವಾಬ್ದಾರಿಯನ್ನ ಬಸವರಾಜ್ ಬೊಮ್ಮಾಯಿ ಹೆಗಲಿಗೆ ವಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.