ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಆಧಾರ್ ಜೋಡಣೆಯಾಗದ ಬಿಪಿಎಲ್, ಎಪಿಎಲ್ ಕಾರ್ಡ್ಗಳನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಮಾನತು ಮಾಡಿದೆ.
ಈಗಾಗಲೇ ಲಕ್ಷಾಂತರ ಎಪಿಎಲ್ ಕಾರ್ಡ್ಗಳು ರದ್ದಾಗಿದ್ದು 60 ಸಾವಿರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗೆ ಶಿಫ್ಟ್ ಮಾಡಲಾಗಿದೆ. ರೇಷನ್ ಅಂಗಡಿಗೆ ತೆರಳಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆಹಾರ ಇಲಾಖೆ ಈಗ ಎಪಿಎಲ್ ಕಾರ್ಡ್ದಾರರಿಗೂ ಬಿಸಿ ಮುಟ್ಟಿಸಿದೆ.
22 ಲಕ್ಷ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳನ್ನು ಆಹಾರ ಇಲಾಖೆ ಅಮಾನತು ಮಾಡಿದ್ದು ಸರಿಯಾಗಿ ಕೆವೈಸಿ ಜೋಡಣೆಯಾದ ಬಳಿಕ ಈ ಕಾರ್ಡ್ದಾರರಿಗೆ ಅಕ್ಕಿ ಸಿಗಲಿದೆ. ರಾಜ್ಯದಲ್ಲಿ ಪ್ರಸ್ತುತ 25,62,562 ಎಪಿಎಲ್ ಕಾರ್ಡ್ಗಳಿದ್ದು 87,86,886 ಸದಸ್ಯರಿದ್ದಾರೆ. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಅಡಿ ಎಪಿಎಲ್ ಹೊಂದಿರುವ ಪ್ರತಿ ಕಾರ್ಡ್ಗೆ ಕೆಜಿ ಅಕ್ಕಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತದೆ.
ಆಪರೇಷನ್ ಬಿಪಿಎಲ್ ಕಾರ್ಡ್
ಬಿಪಿಎಲ್ ಕಾರ್ಡಿಗೆ ಕೆಲವೊಂದು ಷರತ್ತು ಹಾಕುವ ಮೂಲಕ ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಆಪರೇಷನ್ ಬಿಪಿಎಲ್ ಕಾರ್ಡ್ಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ ಬೆನ್ನಲ್ಲೇ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು.
ಎಪಿಎಲ್ ರದ್ದಾದ್ರೆ ಏನೆಲ್ಲ ಸೌಲಭ್ಯ ಸಿಗಲ್ಲ?
1. ಎಪಿಎಲ್ ರದ್ದತಿಯಿಂದ ಗೃಹಲಕ್ಷ್ಮೀ ಯೋಜನೆಯಡಿ ಪಡೆಯುತ್ತಿದ್ದ ಹಣ ಸ್ಥಗಿತ
2. ಕುಟುಂಬದ ಐಡಿ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
3. ವಿವಿಧ ಸರ್ಕಾರಿ ಸೌಲಭ್ಯ ಸಿಗಲ್ಲ
4. ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ.
5. ರಿಯಾಯಿತಿ ದರದಲ್ಲಿ ಅಕ್ಕಿ ಸಿಗಲ್ಲ
ರದ್ದು ಯಾಕೆ?
ಆದಾಯ ತೆರಿಗೆ ಪಾವತಿ, ಸರ್ಕಾರಿ ನೌಕರರಾಗಿದ್ದರೂ ಬಿಪಿಎಲ್ ಕಾರ್ಡ್ ಬಳಸಿ ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದಕ್ಕೆ ಕಾರ್ಡ್ ರದ್ದು ಮಾಡಲಾಗಿದೆ.