ಕರ್ನಾಟಕ ಸರ್ಕಾರ ಈಗ ಹೊಸ ಹೊಸ ಯೋಜನೆಗಳಿಗೆ ಕೈ ಹಾಕಲು ಸಜ್ಜಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಅನ್ನೋ ಅಪವಾದದಿಂದ ಹೊರ ಬರಲು ಈಗ ಹೊಸ ಯೋಜನೆಗಳ ಪಟ್ಟಿಯನ್ನು ರಾಜ್ಯದ ಜನರಿಗೆ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ ಕ್ವಿನ್ ಸಿಟಿ ಸ್ಥಾಪನೆಗೆ ಶಂಕು ಸ್ಥಾಪನೆಯಾಗಿದೆ. ಅದರ ಬೆನ್ನಲ್ಲೆ ಈಗ ಸ್ವಿಫ್ಟ್ ಸಿಟಿ ಸ್ಥಾಪನೆಗೆ ಸರ್ಕಾರ ನಿರ್ಧಾರ ಮಾಡಿದೆ.
ರಾಜ್ಯ ಸರ್ಕಾರದಿಂದ ಸರ್ಜಾಪುರದಲ್ಲಿ ಸ್ವಿಫ್ಟ್ ಸಿಟಿ ಸ್ಥಾಪನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಜಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಸ್ವಿಫ್ಟ್ ಸಿಟಿ ಅಂದ್ರೆ ಸ್ಟಾರ್ಟ್ಅಪ್, ವರ್ಕ್ಸ್ಪೇಸ್, ಇನ್ನೋವೇಷನ್, ಫೈನಾನ್ಸ್, ಟೆಕ್ನಾಲಜಿ ಸಿಟಿ ಇದನ್ನು ಒಟ್ಟಾರೆಯಾಗಿ ಸ್ವಿಫ್ಟ್ ಸಿಟಿ ಎಂದು ಕರೆಯಲಾಗುತ್ತದೆ. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಬಳಿಕ ಮೂರನೇ ಮೇಜರ್ ಇಂಡಸ್ಟ್ರೀಯಲ್ ಹಬ್ ಈ ಸ್ವಿಫ್ಟ್ ಸಿಟಿ ಆಗಲಿದೆ ಎಂದು ಸರ್ಕಾರ ಭರವಸೆಯನ್ನಿಟ್ಟುಕೊಂಡಿದೆ.