ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಗೆಂದು ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
SC, ST ಗೆ ಬಜೆಟ್ ನಲ್ಲಿ ಮೀಸಲಿಟ್ಟ ಒಟ್ಟು ಹಣದಲ್ಲಿ 14,282 ಕೋಟಿ ರೂ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲು ಅನುಮತಿ ನೀಡಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅನುದಾನ ವರ್ಗಾವಣೆಗೆ ತೀರ್ಮಾನ ಕೈಗೊಂಡು ಅನುಮತಿ ನೀಡಲಾಗಿದೆ.
ಯುವನಿಧಿಗೆ 175 ಕೋಟಿ, ಶಕ್ತಿಯೋಜನೆಗೆ 1451 ಕೋಟಿ, ಗೃಹಲಕ್ಷ್ಮೀ ಗೆ 7,881 ಕೋಟಿ, ಅನ್ನಭಾಗ್ಯ ನಗದು 2187 ಕೋಟಿ ಹಾಗೂ ಗೃಹಜ್ಯೋತಿಗೆ 2,585 ಕೋಟಿ ರೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.