ಕಾಂಗ್ರೆಸ್ ಸರ್ಕಾರದ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಗುತ್ತಿಗೆದಾರ ಸಚಿನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ತುಳುಕು ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಬಿಜೆಪಿಯ ನಾಯಕರು ನೆನ್ನೆ ತೀವ್ರವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದ್ದರು. ಈ ಒಂದು ಏಟಿಗೆ ಇಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ ಎಂದು ಬಿಜೆಪಿ ಗೆ ಟಾಂಗ್ ಕೊಟ್ಟಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗ್ರಾಮಿಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಹೊಸ ವರ್ಷ ಪಾಸಿಟಿವ್ ಆಗಿರಬೇಕಿತ್ತು, ಆದರೆ ವಾತಾವರಣ ನೆಗಟಿವ್ ಆಗಿರೋದ್ರಿಂದ ಅದನ್ನೇ ಮಾಡೋಣ ಎಂದಿದ್ದಾರೆ. ಕಳೆದ ನಾಲ್ಕೈದು ದಿನದಿಂದ ಬಿಜೆಪಿ ನಾಯಕರು ನಮಗೆ ಕೆಟ್ಟು ಹೆಸರು ತರಿಸಲು ಸಂಚು ರೂಪಿಸಿದ್ದಾರೆ. ಬಿಜೆಪಿಯವರು ಸರಿಯಾಗಿ ಹೋಮ್ ವರ್ಕ್ ಮಾಡಿಕೊಂಡಿಲ್ಲ. ಛಲವಾದಿ ನಾರಾಯಣಸ್ವಾಮಿ ಅವರಿಗೆ ಸ್ಥಾನ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಕೊಟ್ಟಿಲ್ಲ. ಅವರು ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅವರ ವಿಪಕ್ಷ ನಾಯಕರಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿ ರಿಪಬ್ಲಿಕ್ ಅಂತ ಆರೋಪ ಮಾಡಿದ್ದಾರೆ. ಸ್ಯಾಂಡ್ ಮಾಫಿಯಾ, ಐಪಿಎಲ್ ಕೇಸ್, ರೈತರ ಜಮೀನು ಕಬಳಿಕೆಯ ಸಿಬಿಐ ತನಿಖೆ ನಡೆಯುತ್ತಿದೆ. ಅದರಲ್ಲಿ ಯಾರೆಲ್ಲ ಇದಾರೆ ಅದರ ಬಗ್ಗೆ ತಿಳಿದುಕೊಳ್ಳಿ. ಕಲಬುರಗಿ ರಿಪಬ್ಲಿಕ್ ಮಾಡಿದ್ದು ಯಾರು? ಒಬ್ಬ ರೌಡಿ ನಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ್ದ. ನಮ್ಮ ಕುಟುಂಬ ನಿರ್ಣಾಮ ಮಾಡುತ್ತೇನೆ ಎಂದಿದ್ದ. ನಾವು ಕೂಡ ಆಗ ಕಂಪ್ಲೈಂಟ್ ಕೊಟ್ಟಿದ್ದೇವು. ಆಗ ನಿಮ್ಮ ಅಧಿಕಾರವೇ ಇತ್ತು, ಅವನಿಗೆ ಬಿಜೆಪಿ ಪಾರ್ಟಿ ಎಂಎಲ್ಎ ಟಿಕೆಟ್ ಕೊಟ್ಟಿದ್ದಾರೆ ಎಂದು ಖರ್ಗೆ ಕುಟುಂಬಕ್ಕೆ ಬೈಯ್ದಿರುವ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದಾರೆ ಪ್ರಿಯಾಂಕ್ ಖರ್ಗೆ ಅವರು.
ಮಣಿಕಂಠ ರಾಥೋಡ್ ಎಂಬ ವ್ಯಕ್ತಿ ಖರ್ಗೆ ಕುಟುಂಬದ ಬಗ್ಗೆ ಮಾತನಾಡಿರುವ ಆಡಿಯೊ ಬಿಡುಗಡೆ ಮಾಡಿದ್ದಾರೆ ಸಚಿವ ಪ್ರಿಯಾಂಕ್ ಖರ್ಗೆ. ನಿಮ್ಮ ಸರ್ಕಾರ ಇದ್ದಾಗಲೇ 20 ರಿಂದ 30 ಕಂಪ್ಲೈಂಟ್ ಆಗಿದೆ. ನಮ್ಮ ಕುಟುಂಬ ಸಾಫ್ ಮಾಡ್ತೇನೆ ಎಂದವರಿಗೆ ಟಿಕೆಟ್ ಕೊಟ್ಟಿದ್ದೀರಿ. ಇವರ ಬ್ಯಾನರ್ ಅಡಿ ಹೋರಾಟ ಮಾಡಲು ಬರ್ತಾ ಇದ್ದೀರಿ. ಬಿಜೆಪಿಯವರು ಹತಾಶೆಗೊಂಡು ಈ ರೀತಿ ಮಾಡ್ತಿದ್ದಾರೆ ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ.