ಎರಡು ವರ್ಷಗಳ ಕಾಲಾವಧಿ ನಿಯಮ ಜಾರಿಗೊಂಡ ಬಳಿಕ ಮೊದಲ ಬಾರಿಗೆ 35 ಡಿವೈಎಸ್ಪಿಗಳು ಹಾಗೂ 88 ಇನ್ಸ್ಪೆಕ್ಟರ್ಗಳನ್ನು ಸೋಮವಾರ ಪೊಲೀಸ್ ಇಲಾಖೆ ವರ್ಗಾವಣೆಗೊಳಿಸಿದೆ. ಇನ್ಸ್ಪೆಕ್ಟರ್ ಮೇಲ್ಪಟ್ಟ ಅಧಿಕಾರಿಗಳ ಕಾರ್ಯನಿರ್ವಹಣೆಗೆ ಎರಡು ವರ್ಷಗಳು ಕಾಲಾವಧಿ ನಿಗದಿಗೊಳಿಸಿ ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿತ್ತು. ಈ ನೀತಿಗೆ ಆಕ್ಷೇಪಿಸಿ ಕೆಎಟಿಕ್ಕೆ ಕೆಲವು ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರದ ನೀತಿಯನ್ನು ಕೆಎಟಿ ಎತ್ತಿ ಹಿಡಿದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಹೊಸ ನೀತಿ ಅನುಸಾರ ಪೊಲೀಸರ ವರ್ಗಾವಣೆಗೆ ರಾಜ್ಯ ಪೊಲೀಸ್ ಇಲಾಖೆ ಚಾಲನೆ ನೀಡಿದೆ. ಮೊದಲ ಹಂತದಲ್ಲಿ ಹಲವರನ್ನು ವರ್ಗಾಗೊಳಿಸಿದೆ.