ಭಯಾನಕ ಬಿರು ಬೇಸಿಗೆಯಿಂದ ಬೇಸತ್ತು ಹೋಗಿದ್ದ ರಾಜ್ಯದ ಜನರಿಗೆ ಬೇಸಿಗೆ ಮಳೆ ತುಸು ತಂಪೆರೆದು ಹೋಗಿದೆ. ರಾಜ್ಯದ ಹಲವೆಡೆ ಮೊದಲ ಮಳೆ ಸುರಿದು ಮೈ ಮನ ಉಲ್ಲಾಸವಾಗುವಂತೆ ಮಾಡಿದೆ. ಆದರೆ ಕಳೆದೆರಡು ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ರಾಜ್ಯದಲ್ಲಿ ದರ್ಶನ ಕೊಡುವ ಮುನ್ಸೂಚನೆ ಸಿಕ್ಕಿದೆ.
ಹವಾಮಾನ ಇಲಾಖೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. ಇಂದಿನಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಾಳೆಯಾಗುವ ಸಾಧ್ಯತೆ ಇದ್ದು, ಉತ್ತರ ಕರ್ನಾಟಕ ಒಳಭಾಗದಲ್ಲಿ ಮುಂದಿನ ಮೂರು ದಿನಗಳವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಏಪ್ರಿಲ್ 18 ರಿಂದ 22ವರೆಗೆ ಸಾಧಾರಣ ಮಳೆಯಾಗಲಿದೆ. ಅದರಲ್ಲೂ ಏಪ್ರಿಲ್ 21 ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.