ಕಿರುತೆರೆಯ ಖ್ಯಾತ ನಟಿ ಹಾಗೂ ನಟ ಕಿರುತೆರೆಯ ಧಾರವಾಹಿಯಲ್ಲಿ ನಟಿಸುತ್ತಿರುವಾಗಲೇ ಪ್ರೇಮಾಂಕುರವಾಗಿ ಕುಟುಂಬದ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು, ಈ ಕಿರುತೆರೆಯಲ್ಲೇ ಮುದ್ದಾದ ಜೋಡಿ ಎಂದರೂ ತಪ್ಪಾಗಲಾರದು. ಈ ಜೋಡಿ ಲವ್ ಸ್ಟೋರಿ ಬಗ್ಗೆ ಬಹುತೇಕ ವೀಕ್ಷಕರಿಗೆ ಗೊತ್ತಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮಾಡೋವಾಗ ಇಬ್ಬರಿಗೂ ಸ್ನೇಹ ಶುರುವಾಗಿತ್ತು. ಆ ಸ್ನೇಹ ಪ್ರೀತಿಗೆ ಬುನಾದಿಯಾಯ್ತು. ಅಪಾರ ಫ್ಯಾನ್ಸ್ ಪಡೆದಿದ್ದ ಇಬ್ಬರೂ ಮಿಂಗಲ್ ಆದ್ಮೇಲೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಯ್ತು. ಇದೀಗ ಈ ಸ್ಟಾರ್ ದಂಪತಿ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮುದ್ದಾದ ಮಗನ ಜೊತೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದಾರೆ. ಮಗುವಿನ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮಗುವಾದ ಮೇಲೆ ಮೊದಲ ಭಾರಿಗೆ 3 ತಿಂಗಳ ಮಗುವನ್ನು ಕರೆದುಕೊಂಡು ಖುಷಿಯ ಸಮಯವನ್ನು ಕಳೆಯಲು ಹೊರಗೆ ಹೋಗಿದ್ದಾರೆ.
ಕವಿತಾ ಗೌಡ ಹಾಗೂ ಚಂದನ್ ಗೌಡ ಮಗನಿಗೆ 3 ತಿಂಗಳು ತುಂಬಿವೆ. ಇದೇ ಖುಷಿಯಲ್ಲಿ ಕವಿತಾ ಗೌಡ ಹಾಗೂ ಚಂದನ್ ಗೌಡ ಮಗುವಿನ ಜೊತೆಗೆ ಕಾಲ ಕಳೆದ ವಿಡಿಯೋ ಕ್ಲಿಪ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ದಂಪತಿ ಮುದ್ದಾದ ಮಗನನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ನೋಡಿ ಅಭಿಮಾನಿಗಳು 6 ತಿಂಗಳವರೆಗೂ ಮಗುವನ್ನು ಆಚೆ ಕರೆದುಕೊಂಡು ಹೋಗಬಾರದು, ಎಲ್ಲ ವಾತಾವರಣ ಚೆನ್ನಾಗಿ ಇರೋದಿಲ್ಲ ಅಂತ ಸಲಹೆ ಕೊಟ್ಟಿದ್ದಾರೆ.