- ಚಂಡಮಾರುತ, ಪ್ರವಾಹದಿಂದ ಜನರು ತತ್ತರ
- 300ಕ್ಕೂ ಹೆಚ್ಚು ಸಾವು… ಹಲವರು ನಾಪತ್ತೆ
- ಪ್ರವಾಹದಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಕೀನ್ಯಾ, ತಂಜಾನಿಯಾದಲ್ಲಿ ಚಂಡಮಾರುತ, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇತ್ತ ಬ್ರೆಜಿಲ್ನಲ್ಲೂ ಮಳೆ, ಈಗಾಗಲೇ ಕೆಲವರು ಮೃತ ಪಟ್ಟಿದ್ದು, ಇನ್ನು ಹಲವರು ನಾಪತ್ತೆಯಾಗಿದ್ದಾರೆ.
ಬ್ರೆಜಿಲ್ನ ದಕ್ಷಿಣ ರಿಯೋ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ಮಳೆಯಿಂದಾಗಿ ದೊಡ್ಡ ಸಂಕಷ್ಠ ಸೃಷ್ಟಿಯಾಗಿದೆ. ಮಣ್ಣು ಕುಸಿತದಿಂದ 37 ಜನರು ಸಾವನಪ್ಪಿದ್ದಾರೆ. ಇತ್ತ ರಕ್ಷಣಾ ಸಂಸ್ಥೆ ನೀಡಿದ ವರದಿಯ ಪ್ರಕಾರ 74 ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ರಿಯೋ ಗ್ರಾಂಡೆ ಡೊ ಸುಲ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು. ಮಳೆಯಿಂದಾಗಿ ಮನೆಗಳು, ಸೇತುವೆಗಳು, ರಸ್ತೆಗಳು ಕುಸಿದಿವೆ. ಮತ್ತೊಂದೆಡೆ ಚಂಡಮಾರುತ ಬೀಸುತ್ತಿದೆ. ಮಳೆಯ ಅವಾಂತರಕ್ಕೆ 36 ಜನರು ಗಾಯಗೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ರಿಯೋ ಗ್ರಾಂಡೆ ಡೊ ಸುಲ್ ರಾಜ್ಯದ ಪ್ರಮುಖ ನದಿಯಾದ ಗೈವಾ ಉಕ್ಕಿ ಹರಿಯುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.