ಕೇರಳದ ಕನ್ನೂರು ಜಿಲ್ಲೆಯ ಸೆಂಟ್ರಲ್ ಜೈಲು ಇಷ್ಟು ದಿನ ಕೈದಿಗಳಿಂದ ಆಹಾರವನ್ನು ತಯಾರಿಸಿ ಹೊರಗಡೆ ಮಾರುತ್ತಿದ್ದು. ಫುಡ್ ಫಾರ್ ಫ್ರೀಡಂ ಅಡಿಯಲ್ಲಿ ಹಲವು ಖಾದ್ಯಗಳನ್ನು ತಯಾರಿಸಿ ಆಚೆಗೆ ಕಡಿಮೆ ಬೆಲೆಯಲ್ಲಿ ಮಾರುತ್ತಿತ್ತು. ಈಗ 100 ರೂಪಾಯಿಗೆ ಮಟನ್ ಬಿರಿಯಾನಿ ಹಾಗೂ 260 ರೂಪಾಯಿಗೆ 1 ಕೆಜಿ ಬಾಳೆಕಾಯಿ ಚಿಪ್ಸ್ ಮಾರುವುದನ್ನು ಏಕಾಏಕಿ ನಿಲ್ಲಿಸಿದೆ.
ಈ ಬಗ್ಗೆ ಮಾತನಾಡಿದ ಜೈಲು ಸಿಬ್ಬಂದಿ. ಮಟನ್ ದರದಲ್ಲಿ ಹಾಗೂ ಬಾಳೆಕಾಯಿ ದರದಲ್ಲಿ ಏರಿಕೆ ಸಿಕ್ಕಾಪಟ್ಟೆಯಾಗಿರುವುದರಿಂದ ಮಟನ್ ಬರಿಯಾನಿ ಮಾರುವುದನ್ನ ನಿಲ್ಲಿಸಲಾಗಿದೆ ಎಂದು ಜೈಲು ಸಿಬ್ಬಂದಿ ಹೇಳಿದೆ. ಆದರೆ ಪ್ರತಿ ತಿಂಗಳು ಉತ್ಪಾನೆ ಮಾಡುತ್ತಿದ್ದ 7 ಲಕ್ಷ 82 ಸಾವಿರ ಚಪಾತಿಯನ್ನು ಮುಂದುವರಿಸಿಕೊಂಡು ಹೋಗಿದೆ. ಅದರ ಜೊತೆಗೆ ವೆಜಿಟೆಬಲ್ ಕರಿಽ, ಎಗ್ ಕರಿಽ, ಚಿಕನ್ ಕರಿಽ, ಚಿಕನ್ ಕಬಾಬ್, ಚಿಕನ್ ಚಿಲ್ಲಿ ಸೇರಿದಂತೆ ಹಲವು ಖಾದ್ಯಗಳ ಉತ್ಪಾದನೆಯನ್ನು ಮುಂದುವರಿಸಿದೆ.
ಈಗಾಗಲೇ ಜೈಲಿನ ಚಪಾತಿಗೆ ಬಹುಬೇಡಿಕೆ ಬಂದಿದ್ದು. ಮುಂದಿನ ದಿನಗಳಲ್ಲಿ ಇನ್ನು ಹಲವು ಬಗೆಯ ಸ್ನಾಕ್ಸ್ಗಳ ಉತ್ಪಾದನೆಗೆ ಜೈಲು ಸಿಬ್ಬಂದಿ ಸಜ್ಜಾಗಿದೆ. ಈ ಎಲ್ಲಾ ಪದಾರ್ಥಗಳನ್ನು ಜೈಲಿನಲ್ಲಿರುವ ಕೈದಿಗಳೇ ತಯಾರಿಸುತ್ತಾರೆ. ಜೈಲಿನಲ್ಲಿ ಸಿದ್ಧಗೊಳ್ಳುವ ಈ ಆಹಾರವು ಎರಡು ಕೌಂಟರ್ಗಳಲ್ಲಿ ಜನರಿಗೆ ನೀಡಲಾಗುತ್ತದೆ. ಫುಡ್ ವ್ಯಾನ್ಗಳ ಮೂಲಕ ತೆಗೆದುಕೊಂಡು ಹೋಗಿ ಕನ್ನೂರಿನ ಹಳೆಯ ಬಸ್ ನಿಲ್ದಾಣ ಥಲಿಪಾರಂಬ್ ಹಾಗೂ ಥಲಸ್ಸೆರಿಯ ಕುತುಪರಂಭಾ ಬಸ್ ನಿಲ್ದಾಗಳಲ್ಲಿ ದೊರೆಯುತ್ತವೆ.