- ಗೂಗಲ್ ಮ್ಯಾಪ್ ನಂಬಿ ಕಾರಿನ್ನ ಹಳ್ಳದೊಳಗೆ ಇಳಿಸಿದ ಪ್ರವಾಸಿಗರು
- ಸ್ಥಳೀಯ ನಿವಾಸಿಗಳಿಂದ ಪ್ರಣಾಪಾಯದಿಂದ ಪಾರಾದ ನಾಲ್ವರು
ಗೂಗಲ್ ಮ್ಯಾಪ್ ನಂಬಿ ಹೈದರಾಬಾದ್ನ ಪ್ರವಾಸಿಗರ ತಂಡವೊಂಡು ಕೇರಳ ಪ್ರವಾಸಕ್ಕೆಂದು ಕಾರಿನಲ್ಲಿ ಬಂದು ಸೀದಾ ಹಳ್ಳದೊಳಗೆ ಇಳಿಸಿದ್ದಾರೆ. ಕಾರು ಸಂಪೂರ್ಣವಾಗಿ ಹಳ್ಳದೊಳಗೆ ಮುಳುಗಿದ್ದು, ಸ್ಥಳೀಯ ನಿವಾಸಿಗಳ ಸಹಾಯದಿಂದ ಕಾರಿನಲ್ಲಿದ್ದ ನಾಲ್ವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ತಡರಾತ್ರಿ ಮಹಿಳೆ ಸೇರಿದಂತೆ ನಾಲ್ವರ ಗುಂಪು ಅಲಪ್ಪುಳ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ಪ್ರವಾಸಿಗರು ಪ್ರಯಾಣಿಸುತ್ತಿದ್ದ ವೇಳೆ ಮಳೆಯಿಂದಾಗಿ ರಸ್ತೆ ಹೊಳೆಯಂತಾಗಿತ್ತು. ಹಾಗೆಯೇ ಪ್ರವಾಸಿಗರಿಗೆ ಈ ಪ್ರದೇಶ ಪರಿಚಯವಿಲ್ಲದ ಕಾರಣ, ಅವರು ಗೂಗಲ್ ಮ್ಯಾಪ್ ನಂಬಿ ಡ್ರೈವಿಂಗ್ ಮಾಡಿದ್ದಾರೆ. ಪರಿಣಾಮ ಕಾರು ನೇರವಾಗಿ ಹರಿಯುತ್ತಿದ್ದ ಹಳ್ಳದೊಳಗೆ ಇಳಿದಿದೆ. ಮುಳುಗುತ್ತಿದ್ದ ವೇಳೆ ಪ್ರವಾಸಿಗರ ಕೂಗು ಕೇಳುತ್ತಿದ್ದಂತೆ ಸ್ಥಳೀಯರು ಧಾವಿಸಿ ರಕ್ಷಣೆ ಮಾಡಿದ್ದಾರೆ.