ಪಾಕಿಸ್ಥಾನದಲ್ಲಿ 4 ದಶಕ ಗಳಿಂದ ಅಡಗಿಕೊಂಡಿದ್ದ ಖಲಿಸ್ಥಾನ ಉಗ್ರ ಗಜಿಂದರ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 1981ರಲ್ಲಿ ಹೊಸದಿಲ್ಲಿ- ಶ್ರೀನಗರ ವಿಮಾನವನ್ನು ಈತ, 4 ಉಗ್ರರೊಂದಿಗೆ ಹೈಜಾಕ್ ಮಾಡಿದ್ದ. ಭಾರತದಲ್ಲಿ ಬಂಧಿಯಾಗಿದ್ದ ಖಲಿಸ್ತಾನ ಉಗ್ರರನ್ನು ಬಿಡುಗಡೆಗೊಳಿಸಲು ಹಾಗೂ 4 ಕೋಟಿ ರೂ. ನೀಡಲು ಹೈಜಾಕ್ ಮೂಲಕ ಬೇಡಿಕೆ ಇಟ್ಟಿದ್ದ. ಬಳಿಕ ಪಾಕಿಸ್ಥಾನ ಪೊಲೀಸರು ಭಯೋತ್ಪಾದಕರನ್ನು ಬಂಧಿಸಿದ್ದರು ಎನ್ನಲಾಗಿದೆ. ಅವನನ್ನು ಭಾರತಕ್ಕೆ ಒಪ್ಪಿಸುವಂತೆ ಪಾಕಿಸ್ಥಾನಕ್ಕೆ ಸೂಚಿಸಿದರೂ ಸಹ, ಗಜಿಂದರ್ ನಮ್ಮ ದೇಶದಲ್ಲಿಲ್ಲ ಎಂದು ಪಾಕ್ ಸುಳ್ಳು ಹೇಳಿತ್ತು.