ಕನ್ನಡ ಚಿತ್ರರಂಗದಲ್ಲಿ ಶುಕ್ರವಾರ ಬಂತೆಂದರೆ ಸಂಭ್ರಮ ಸಡಗರ. ಏಕೆಂದರೆ ಶುಕ್ರವಾರ ಕನ್ನಡ ಚಲನಚಿತ್ರಗಳು ತೆರೆ ಮೇಲೆ ಕಾಣುವ ದಿನ. ಅದರಂತೆಯೇ ಕಳೆದ ವಾರ ರಿಯಲ್ ಸ್ಟಾರ್ ಉಪೇಂದ್ರ ಅವರು ನಟಿಸಿ ನಿರ್ದೇಶಿಸಿದ್ದ ಯು ಐ ಸಿನಿಮಾ ತೆರೆ ಕಂಡು, ಭರ್ಜರಿ ಯಶಸ್ವಿಯಾಗಿತ್ತು. ಪ್ರೇಕ್ಷಕರ ಮೆಚ್ಚುಗೆಗೆ ನಟ ಉಪೇಂದ್ರ ಪಾತ್ರರಾಗಿದ್ದರು. ಈ ವಾರ ಯಾವ ನಟನ ಸಿನಿಮಾ ಬರಬಹುದು ಎಂದು ಕಾದು ಕುಳುತಿದ್ದ ಸಿನಿ ಪ್ರೇಕ್ಷಕರಿಗೆ 2 ದಿನ ಮುಂಚಿತವಾಗಿಯೇ ಸಿನಿ ರಸದೌತಣವನ್ನ ಉಣಬಡಿಸಿದ್ದರು ಕನ್ನಡದ ಬಾದ್ಷಾ ಕಿಚ್ಚ ಸುದೀಪ್.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿರುವ ಮ್ಯಾಕ್ಸ್ ಚಿತ್ರ ಬುಧವಾರ ತೆರೆ ಕಂಡಿತ್ತು. ಪೊಲೀಸ್ ಪಾತ್ರದ ಮೂಲಕ ಕಿಚ್ಚ ಸುದೀಪ್ ಅಭಿಮಾನಿಗಳನ್ನ ರಂಜಿಸಿದ್ದರು. ಎಲ್ಲಾ ಥಿಯೇಟರ್ ಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬುಕ್ ಮೈ ಶೋ ನಲ್ಲಿ ಮ್ಯಾಕ್ಸ್ ಚಿತ್ರಕ್ಕೆ ಭರ್ಜರಿಯಾಗಿ ಬುಕಿಂಗ್ ಆಗ್ತಿದೆ. ತೆರೆ ಕಂಡ ಒಂದನೇ ದಿನದಿಂದಲೇ ಮ್ಯಾಕ್ಸ್ ಚಿತ್ರ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಈ ಸಂದರ್ಭದಲ್ಲಿಯೇ ಕಿಚ್ಚ ಸುದೀಪ್ ಅವರು ತಮ್ಮ ಸ್ನೇಹಿತರೊಟ್ಟಿಗೆ ಸಖತ್ ಪಾರ್ಟಿ ಮಾಡಿದ್ದಾರೆ.
ಈ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಅವರು ಕೇಕ್ ಕಟ್ ಮಾಡಿ ಮ್ಯಾಕ್ಸ್ ಚಿತ್ರದ ಯಶಸ್ಸನ್ನ ಸಂಭ್ರಮಿಸಿದ್ದಾರೆ. ಸುದೀಪ್ ಅವರೊಂದಿಗೆ ಅವರ ಧರ್ಮ ಪತ್ನಿ ಪ್ರಿಯಾ ಕೂಡಾ ಸಾಥ್ ಕೊಟ್ಟಿದ್ದಾರೆ. ಈ ಸೆಲೆಬ್ರೇಷನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿವೆ. ಆದರೆ ಸುದೀಪ್ ಕಟ್ ಮಾಡಿದ ಕೇಕ್ ಮೇಲೆ ಒಂದು ಬರಹವಿದೆ. ಅದೇನೆಂದರೆ ‘BOSSISM ಕಾಲ ಮುಗೀತು MAXIMUM MASS ಕಾಲ ಶುರುವಾಯ್ತು’ ಎಂಬ ಈ ಒಂದು ಬರಹ ಈಗ ಭಾರೀ ಚರ್ಚೆಯಾಗುತ್ತಿದೆ. ಏಕೆಂದರೆ ನಟ ಸುದೀಪ್ ಈ ಒಂದು ಬರಹದಿಂದ ನಟ ದರ್ಶನ್ ಗೆ ಟಾಂಗ್ ಕೊಟ್ಟಿದ್ದಾರೆ ಎಂಬ ಚರ್ಚೆ ಶುರುವಾಗಿದೆ.
ದರ್ಶನ್ ಟೈಂ ಸರಿ ಇದ್ದಿದ್ರೆ, ಇದೇ ದಿನ ನಟ ದರ್ಶನ್ ಅವರ ಡೆವಿಲ್ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದರಿಂದ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಹೀಗಾಗಿ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ತೆರೆಕಂಡಿದೆ. ಮೊದಲ ದಿನವೇ ಮ್ಯಾಕ್ಸ್ ಗೆ ಮ್ಯಾಕ್ಸಿಮಮ್ ಪ್ರಶಂಸೆಗಳ ಸುರಿಮಳೆ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ ಕೂಡ ಮ್ಯಾಕ್ಸ್ ಆರ್ಭಟ ಸಖತ್ ಜೋರಿದೆ. ಇದೀಗ ಮೊದಲ ದಿನ ಮ್ಯಾಕ್ಸ್ ಬ್ಲಾಕ್ ಬಸ್ಟರ್ ಹಿಟ್ ಆಗ್ತಿದ್ದಂತೆ ಕಿಚ್ಚನ ಮನೆಯಲ್ಲಿ ಸಖತ್ ಸಕ್ಸಸ್ ಪಾರ್ಟಿ ನಡೆದಿದೆ. ಅದರಲ್ಲಿ ಚಿತ್ರತಂಡದ ತಂತ್ರಜ್ಞರು, ಕಲಾವಿದರು ಕೂಡ ಭಾಗಿಯಾಗಿದ್ದಾರೆ. ಅಲ್ಲದೆ ಚಿತ್ರರಂಗದ ಒಂದಷ್ಟು ಕಲಾವಿದರು ಕಿಚ್ಚನ ಸಕ್ಸಸ್ ಪಾರ್ಟಿಗೆ ಸಾಕ್ಷಿ ಆಗಿದ್ದಾರೆ.
ಪಾರ್ಟಿಯಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿರೋದು ಕೇಕ್ ಮೇಲೆ ಬರೆಸಿರೋಲೈನ್ಸ್ ಮೇಲೆ. ಹೌದು.. ‘ಬಾಸಿಸಮ್ ಕಾಲ ಮುಗೀತು.. ಮ್ಯಾಕ್ಸಿಮಮ್ ಮಾಸ್ ಕಾಲ ಶುರು’ ಅಂತ ಬರೆಸಿರೋ ಕೇಕ್ ನ ಬಾದ್ ಷಾ ಸುದೀಪ್ ಕಟ್ ಮಾಡಿದ್ದಾರೆ. ಇದು ನಟ ದರ್ಶನ್ ಹಾಗೂ ಆತನ ಫ್ಯಾನ್ಸ್ ಗೆ ಪರೋಕ್ಷವಾಗಿ ಇನ್ಮೇಲೆ ಬಾಸಿಸಮ್ ಕಾಲ ಮುಗೀತು ಅಂತ ಹೇಳಿದ್ದಾರೆ ಅನ್ನೋದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.