ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸುದೀಪ್ ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೂ ಸುದೀಪ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಗ್ಬಾಸ್ ಜಗದೀಶ್, ಶೋನಲ್ಲಿ ತಾಯಿಯ ಮಹತ್ವ ಹೇಳಿದ ಕಿಚ್ಚ ದಾದಾಗೆ ಹೀಗಾಗಬಾರದಿತ್ತು, ನಾನು ಸುದ್ದಿಗೋಷ್ಠಿ ಯಾವತ್ತು ಬೇಕಾದ್ರೂ ಮಾಡಬಹುದು, ನನಗೆ ಪದಗಳೇ ಬರ್ತಿಲ್ಲ.. ನಾವೆಲ್ಲ ಮನುಷ್ಯರು. ದಾದಾ ಕುಟುಂಬಕ್ಕೆ ಈ ನಷ್ಟ ತಡೆಯೋ ಶಕ್ತಿ ಸಿಗಲಿ. ಕಿಚ್ಚನ ಆಜ್ಙೆ ಮೇರೆಗೆ ಸುದ್ದಿಗೋಷ್ಠಿ ಮತ್ತೆ ಮಾಡುತ್ತೇನೆ ಎಂದು ತಮ್ಮ ಇವತ್ತಿನ ಸುದ್ದಿಘೋಷ್ಠಿಯನ್ನ ಮುಂದೂಡಿದ್ದಾರೆ ಜಗದೀಶ್.