ದಿ ವೆಯ್ಟ್ ಈಸ್ ಓವರ್.. ಎರಡೂವರೆ ವರ್ಷಗಳ ಕಾಯುವಿಕೆಯ ನಂತ್ರ ಬದ್ ಷಾ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಬೆಳ್ಳಿತೆರೆ ಬೆಳಗಿದೆ. ಮುಂಜಾನೆ 6 ಗಂಟೆಯಿಂದಲೇ ಶುರುವಾದ ಕಿಚ್ಚನ ಅಸಲಿ ಮ್ಯಾಕ್ಸ್ ಆಟಕ್ಕೆ ಎಲ್ಲೆಡೆಯಿಂದ ಬೊಂಬಾಟ್ ರೆಸ್ಪಾನ್ಸ್ ಬರ್ತಿದೆ. ಹಾಗಾದ್ರೆ ಸಿನಿಮಾ ಹೇಗಿದೆ..? ಕಥೆ ಏನು..? ಕಲಾವಿದರ ಪರ್ಫಾಮೆನ್ಸ್ ಗೆ ಎಷ್ಟು ಮಾರ್ಕ್ಸ್ ಕೊಡಬಹುದು ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಇಲ್ಲಿ ಗ್ಯಾರಂಟಿ ನ್ಯೂಸ್ ಕೊಡ್ತಿರೋ ಗ್ಯಾರಂಟಿ ರಿವ್ಯೂನ ಒಮ್ಮೆ ಓದಿಬಿಡಿ.
ಚಿತ್ರ: ಮ್ಯಾಕ್ಸ್
ನಿರ್ದೇಶನ: ವಿಜಯ್ ಕಾರ್ತಿಕೇಯ
ನಿರ್ಮಾಣ: ಕಲೈಪುಲಿ ಎಸ್ ಥಾನು
ಸಂಗೀತ: ಅಜನೀಶ್ ಲೋಕನಾಥ್
ಕ್ಯಾಮೆರಾ: ಶೇಖರ್ ಚಂದ್ರ
ತಾರಾಗಣ: ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಘ್ಲೆ, ಸುನಿಲ್, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಇಳವರಸು, ಉಗ್ರಂ ಮಂಜು, ರೆಡಿನ್ ಕಿಂಗ್ ಸ್ಲಿ, ವಿಜಯ್ ಚೆಂಡೂರು ಮುಂತಾದವರು.
ಮ್ಯಾಕ್ಸ್ ಸ್ಟೋರಿಲೈನ್:
ಮ್ಯಾಕ್ಸ್.. ಜಸ್ಟ್ ಒಂದೇ ಒಂದು ರಾತ್ರಿಯಲ್ಲಿ ನಡೆಯೋ ರೋಚಕ ಕಥೆ. ಸಸ್ಪೆನ್ಷನ್ ನಲ್ಲಿರೋ ಅರ್ಜುನ್ ಮಹಾಕ್ಷಯ್ ಅನ್ನೋ ಪೊಲೀಸ್ ಇನ್ಸ್ ಪೆಕ್ಟರ್, ಸ್ಟೇಷನ್ ಗೆ ಬಂದು ರಿಪೋರ್ಟ್ ಮಾಡ್ಕೊಳ್ಳೋಕೂ ಹಿಂದಿನ ದಿನದ ರಾತ್ರಿ ನಡೆಯೋ ಕಥೆ ಇದಾಗಿದೆ. ಇಬ್ಬರು ರಾಜಕಾರಣಿಗಳ ಮಕ್ಕಳನ್ನ ಸ್ಟೇಷನ್ ಗೆ ಕರೆತರೋ ಅರ್ಜುನ್ ಗೆ ಆ ರಾತ್ರಿಯಿಡೀ ನಿದ್ದೆ ಇಲ್ಲದಂತಾಗುತ್ತೆ. ಆಗಬಾರದ್ದೆಲ್ಲಾ ಆಗಿ ಹೋಗುತ್ತೆ. ಆ ರಾತ್ರಿಯಿಡೀ ನಡೆಯುವ ಅವಘಡಗಳು, ಅವುಗಳನ್ನ ತನ್ನ ತೋಳ್ಬಲ ಹಾಗೂ ಮನೋಬಲದಿಂದ ಆತ ಹೇಗೆ ನಿಭಾಯಿಸ್ತಾನೆ ಅನ್ನೋದನ್ನ ಮ್ಯಾಕ್ಸಿಮಮ್ ಮಾಸ್ ಆಗಿ ಹೇಳಿದ್ದಾರೆ ನಿರ್ದೇಶಕ ವಿಜಯ್ ಕಾರ್ತಿಕೇಯ.
ಮ್ಯಾಕ್ಸ್ ಆರ್ಟಿಸ್ಟ್ ಪರ್ಫಾಮೆನ್ಸ್:
ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಬೆಂಕಿ ಬಿರುಗಾಳಿಯಾಗಿ ಮ್ಯಾಕ್ಸಿಮಮ್ ಆಟ ಆಡಿದ್ದಾರೆ. ಯೆಸ್.. ಎಲ್ಲಾ ಕಲಾವಿದರ ಟೀಂ ಮಹಾದಂಡನಾಯಕನಾಗಿ ಒನ್ ಮ್ಯಾನ್ ಆರ್ಮಿಯಂತೆ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ, ಸಿಂಗಲ್ ಶೇರ್ ಆಟ ಆಡಿ, ಅದನ್ನ ಸಮರ್ಪಕವಾಗಿ ಸೂರ್ಯೋದಯಕ್ಕೂ ಮೊದಲೇ ಮುಗಿಸ್ತಾರೆ ನಾಯಕನಟ. ಕಿಚ್ಚನ ಸ್ಟೈಲು, ಮ್ಯಾನರಿಸಂ, ಗತ್ತು, ಗಮ್ಮತ್ತು ಮತ್ತು ತಾಕತ್ತು ಎಲ್ಲವೂ ಇಲ್ಲಿ ಹುಬ್ಬೇರಿಸುತ್ತವೆ. ಯುದ್ಧಕ್ಕೆ ಬೇಕಾಗಿರೋದು ಶಕ್ತಿ ಮಾತ್ರವಲ್ಲ, ಅದಕ್ಕೆ ಯುಕ್ತಿ ಕೂಡ ಮುಖ್ಯ ಅನ್ನೋದನ್ನ ಈ ಮ್ಯಾಕ್ಸ್ ಚಿತ್ರದ ಮೂಲಕ ಬಹಳ ಅದ್ಭುತವಾಗಿ ತನ್ನ ಪಾತ್ರದ ಮೂಲಕ ಸುದೀಪ್ ತೋರಿಸಿದ್ದಾರೆ. ಕಿಚ್ಚನ ಒಂದೊಂದು ಮೊಮೆಂಟ್ ಗೂ ಶಿಳ್ಳೆ, ಚಪ್ಪಾಳೆಗಳ ಮಹಾಪೂರವೇ ಹರಿದುಬರಲಿದೆ.
ಇನ್ನು ವರಲಕ್ಷ್ಮೀ ಶರತ್ ಕುಮಾರ್ ಕ್ರೈಂ ಇನ್ಸ್ ಪೆಕ್ಟರ್ ರೂಪಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪುಷ್ಪ ಫೇಮ್ ಸುನಿಲ್ ಗಣಿ ಅನ್ನೋ ವಿಲನ್ ಪಾತ್ರದಲ್ಲಿ ಅಬ್ಬರಿಸುತ್ತಾರೆ. ಸಂಯುಕ್ತಾ, ಸುಕೃತಾ, ಉಗ್ರಂ ಮಂಜು, ಗೋವಿಂದೇಗೌಡ, ಇಳವರಸು, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ವಿಜಯ್ ಚೆಂಡೂರು, ಸುಧಾ ಬೆಳವಾಡಿ, ಪ್ರವೀಣ್ ಹೀಗೆ ಎಲ್ಲಾ ಕಲಾವಿದರು ತಮಗೆ ನೀಡಿದ ಪಾತ್ರಗಳನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಮ್ಯಾಕ್ಸ್ ಪ್ಲಸ್ ಪಾಯಿಂಟ್ಸ್:
- ಬಾದ್ ಷಾ ಕಿಚ್ಚನ ಬೆಂಕಿ ಬಿರುಗಾಳಿ ಪರ್ಫಾಮೆನ್ಸ್
- ವಿಜಯ್ ಕಾರ್ತಿಕೇಯ ಕಥೆ, ನಿರ್ದೇಶನ & ನಿರೂಪಣೆ
- ಸ್ಯಾಂಡಲ್ ವುಡ್ ಎಕ್ಸ್ ಪ್ರೆಸ್ ನಂತೆ ಫಾಸ್ಟ್ ಆಗಿ ಓಡುವ ಸ್ಕ್ರೀನ್ ಪ್ಲೇ
- ಒನ್ ನೈಟ್ ಕಥೆಯನ್ನ ಪ್ರಸ್ತುತಪಡಿಸಿದ ರೀತಿ ಅವರ್ಣನೀಯ
- ಅಜನೀಶ್ ಲೋಕನಾಥ್ ಬ್ಯಾಗ್ರೌಂಡ್ ಸ್ಕೋರ್ ಸೂಪರ್ಬ್
- ಶೇಖರ್ ಚಂದ್ರ ಸಿನಿಮಾಟೋಗ್ರಫಿ ಇಂಪ್ರೆಸ್ಸೀವ್
- ಮೇಕಿಂಗ್ ಸಖತ್ ರಿಚ್ ಆಗಿ ಮೂಡಿಬಂದಿದೆ
- ಮನರಂಜನೆ ಜೊತೆ ಖಾಕಿ ಬದ್ಧತೆಯ ಸಂದೇಶ
ಮ್ಯಾಕ್ಸ್ ಮೈನಸ್ ಪಾಯಿಂಟ್ಸ್:
ಕಿಚ್ಚ ಸುದೀಪ್ ಗೆ ಇಲ್ಲಿ ಸಾಕಷ್ಟು ಮಂದಿ ವಿಲನ್ ಗಳಿದ್ದಾರೆ. ಆದ್ರೆ ಖಡಕ್ ಖಳನಾಯಕ ಯಾರು ಅನ್ನೋದೇ ಯಕ್ಷಪ್ರಶ್ನೆ. ಸಿಂಹದಂತೆ ಸಿಂಗಲ್ ಆಗಿ ಹೋರಾಡುವ ನಾಯಕನಟನಿಗೆ ಒಬ್ಬೇ ಒಬ್ಬ ಖಡಕ್ ಖಳನಟ ತಗಲಬೇಕಿತ್ತು ಅನಿಸಲಿದೆ. ಇನ್ನು ಸುನಿಲ್ ಹಾಗೂ ವರಲಕ್ಷ್ಮೀ ಶರತ್ ಕುಮಾರ್ ಅವರ ಪಾತ್ರಗಳನ್ನ ಮತ್ತಷ್ಟು ಗಟ್ಟಿಗೊಳಿಸಬಹುದಿತ್ತು. ಕೈದಿ ಚಿತ್ರ ನೆನಪಿಗೆ ಬಂದರೂ ಸಹ, ಕಥೆ ಹಾಗೂ ಪ್ರೆಸೆಂಟೇಷನ್ ಮೂಲಕ ಅದೇ ಬೇರೆ, ಇದೇ ಬೇರೆ ಅನಿಸಲಿದೆ. ಇಷ್ಟು ಬಿಟ್ಟರೆ ಉಳಿದಂತೆ ಎಲ್ಲವೂ ನೋಡುಗನನ್ನ ಸೀಟ್ ಅಂಚಿನಲ್ಲಿ ಕೂರಿಸಲಿದೆ.
ಮ್ಯಾಕ್ಸ್ ಗೆ ಗ್ಯಾರಂಟಿ ನ್ಯೂಸ್ ರೇಟಿಂಗ್: 4/5
ಮ್ಯಾಕ್ಸ್ ಫೈನಲ್ ಸ್ಟೇಟ್ ಮೆಂಟ್: ವರ್ಷಾಂತ್ಯಕ್ಕೆ ಮ್ಯಾಕ್ಸ್ ಸಿನಿಮಾ ಹಂಡ್ರೆಡ್ ಪರ್ಸೆಂಟ್ ನೋಡುಗರಿಗೆ ಮ್ಯಾಕ್ಸಿಮಮ್ ಮನರಂಜನೆ ನೀಡಲಿದೆ. ಇಲ್ಲಿ ಕ್ಲಾಸ್, ಮಾಸ್, ಸಸ್ಪೆನ್ಸ್, ಕ್ರೈಂ, ಪೊಲಿಟಿಕಲ್ ಡ್ರಾಮಾ, ಖಾಕಿ ಬದ್ಧತೆ ಎಲ್ಲವೂ ಇದೆ. ಸದಾ ಸಕ್ಸಸ್ ಫುಲ್ ಸಿನಿಮಾಗಳನ್ನೇ ನೀಡ್ತಾ ಬರ್ತಿರೋ ತಮಿಳು ಪ್ರೊಡ್ಯೂಸರ್ ಕಲೈಪುಲಿ ಎಸ್ ಥಾನು, ಈ ಬಾರಿ ಕೂಡ ಒಂದೊಳ್ಳೆ ಕಥೆಯನ್ನೇ ಸೆಲೆಕ್ಟ್ ಮಾಡಿ, ಅದ್ಧೂರಿ ಮೇಕಿಂಗ್ ನೊಂದಿಗೆ ತೆರೆಗೆ ತಂದಿದ್ದಾರೆ. ಕಿಚ್ಚನ ಫ್ಯಾನ್ಸ್ ಗೆ ಇದು ನಿಜಕ್ಕೂ ಊರಹಬ್ಬಕ್ಕಿಂತ ದೊಡ್ಡ ಮಟ್ಟದ ಕಿಕ್ ಕೊಡಲಿದೆ. ಕಿಚ್ಚನ ಹೈಟು, ವೆಯ್ಟ್ ಗೆ ತಕ್ಕನಾದ ಪಾತ್ರವೂ ಹೌದು. ಫಟಾ ಫಟ್ ಅಂತ ಓಡುವ ಸ್ಕ್ರೀನ್ ಪ್ಲೇ ನೋಡುಗರಿಗೆ ಎಲ್ಲೂ ಬೋರು ಹೊಡೆಸಲ್ಲ. ಪೊಲೀಸ್ ಆಫೀಸರ್ ಒಬ್ಬ ಎಷ್ಟು ನಿಷ್ಠೆಯಿಂದ ಕೆಲಸ ಮಾಡಲು ಸಾಧ್ಯ ಹಾಗೂ ಎಂಥದ್ದೇ ಸಮಸ್ಯೆ ಎದುರಾದ್ರೂ ಅದನ್ನ ಎದುರಿಸಬಲ್ಲ ಅನ್ನೋದಕ್ಕೆ ಇಡೀ ಪೊಲೀಸ್ ಇಲಾಖೆಗೆ ಇಂತಹ ಸಿನಿಮಾ ಚೈತನ್ಯ, ಉತ್ಸಾಹ & ಹುಮ್ಮಸ್ಸು ತುಂಬಲಿದೆ. ರಕ್ತಚಂದನ ಮರಗಳ ಸ್ಮಗ್ಲರ್ ಕಥೆ ಹೇಳುವ ಪುಷ್ಪ ಅಂತಹ ಸಿನಿಮಾಗಳ ಬದಲಿಗೆ ಇಂತಹ ಒಳ್ಳೆಯ ಕಾನ್ಸೆಪ್ಟ್ ಬೇಸ್ಡ್ ಹಾಗೂ ಸಮಾಜಮುಖಿ ಚಿತ್ರಗಳನ್ನ ಜನ ಪ್ರೋತ್ಸಾಹಿಸಬೇಕು. ಒಟ್ಟಾರೆ ಕ್ರಿಸ್ ಮಸ್ ಹಾಲಿಡೇಸ್ ನಲ್ಲಿರೋ ಮಂದಿಗೆ ಥಿಯೇಟರ್ ನಲ್ಲಿ ಮ್ಯಾಕ್ಸ್ ಮ್ಯಾಕ್ಸಿಮಮ್ ಎಂಟರ್ ಟೈನ್ಮೆಂಟ್ ಕೊಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್