ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ನಿಧನರಾಗಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ತಮ್ಮ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಸುದೀಪ್ ಅವರ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಜೆಪಿ ನಗರದ ಸುದೀಪ್ ಅವರ ಮನೆಗೆ ತಾಯಿ ಸರೋಜಾ ಅವರ ಮೃತದೇಹ ತರಲಾಗಿತ್ತು. ಅಲ್ಲೇ ಕಲಾವಿದರಿಗೆ, ರಾಜಕೀಯ ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅವರ ಅಂತ್ಯಕ್ರಿಯೆಯು ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ನೆರವೇರಿತು. ಅಂತಿಮ ವಿಧಿ ವಿಧಾನಗಳನ್ನ ಪುತ್ರ ಸುದೀಪ್ ನೆರವೇರಿಸಿದರು.
ಇದನ್ನು ಓದಿ : ಈ ನಟಿಯ ನಟನೆಗೆ ಫಿದಾ ಆಗಿ, ಫ್ಯಾನ್ ಆಗ್ಬಿಟ್ರಾ ಮಣಿರತ್ನಂ!