ಇದೇ ತಿಂಗಳ 24 ರಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೊರಡಲಿದ್ದಾರೆ. ಇತ್ತೀಚೆಗಷ್ಟೇ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗುವ ನಿರ್ಧಾರ ಮಾಡಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಭೈರತಿ ರಣಗಲ್ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡಾಗ ತಿರುಪತಿಗೆ ಹೋಗಿ ಶಿವರಾಜ್ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ಕುಮಾರ್ ಮುಡಿ ಕೊಟ್ಟು ಹರಕೆ ತೀರಿಸಿ ಬಂದಿದ್ದರು.ಸದ್ಯ ಶಿವಣ್ಣ ಅಮೆರಿಕಾಗೆ ತೆರಳಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶಿವಣ್ಣನ ಮನೆಗೆ ನಟ ಕಿಚ್ಚ ಸುದೀಪ ಆಗಮಿಸಿದ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಇಂದು ಶಿವಣ್ಣನ ಮನೆಗೆ ತೆರಳಿದ ಕಿಚ್ಚ ಸುದೀಪ ಸುದೀರ್ಘವಾದ ಸಮಯವನ್ನು ಅವರೊಂದಿಗೆ ಕಳೆದಿದ್ದಾರೆ. ಭೇಟಿ ವೇಳೆ ಆರೋಗ್ಯ ವಿಚಾರಿಸಿದ್ದಾರೆ ಗಟ್ಟಿಯಾಗಿ ತಬ್ಬಿಕೊಂಡು ಭಾವುಕರು ಆಗಿದ್ದರು. ಕಿಚ್ಚ ಜೊತೆ ಮಾಜಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವ ಮಧು ಬಂಗಾರಪ್ಪ ಕೂಡ ಇದ್ದರು. ಎಲ್ಲರೂ ಒಂದೇ ಕಡೆ ಸೇರಿಕೊಂಡು ಉಭಯಕುಶೋಲಪರಿಯನ್ನು ವಿಚಾರಿಸಿದರು. ಎಲ್ಲ ಮಾತುಗಳು ಮುಗಿದ ಬಳಿಕ ಎದ್ದು ಬರುವಾಗ ಕಿಚ್ಚ ಸುದೀಪ್ ಶಿವಣ್ಣನ್ನು ತಬ್ಬಿಕೊಂಡು ಒಂದು ಕ್ಷಣ ಭಾವುಕರಾಗಿದ್ದರು.
ಶಿವಣ್ಣನಿಗೆ ಈಗ ಬರೋಬ್ಬರಿ 62 ವರ್ಷ. ಹೀಗಾಗಿ ಆರೋಗ್ಯದಲ್ಲಿ ಕೊಂಚ ಸಮಸ್ಯೆಯಾಗಿದೆ. ಅದೇ ಕಾರಣಕ್ಕೆ ಅಮೆರಿಕಾಗೆ ಹೋಗ್ತಾ ಇದ್ದೀವಿ ಎಂದು ತಿರುಪತಿಗೆ ಹೋಗಿ ಮುಡಿಕೊಟ್ಟು ಬಂದ ವೇಳೆಯೇ ಹೇಳಿದ್ದರು. ಶಿವರಾಜ್ ಕುಮಾರ್ ಅವರ ಪತ್ನಿ ಹಾಗೂ ಅವರ ಪುತ್ರಿ ಹಾಗೂ ಹಿತೈಷಿಗಳೆಲ್ಲಾ ಅಮೆರಿಕಾಗೆ ಹೋಗುವ ಮೊದಲು ತಿರುಪತಿಗೆ ತೆರಳಿ ಹರಕೆ ತೀರಿಸಿ ಬಂದಿದ್ದರು.