- ಕಲ್ಲುಗಣಿಗಾರಿಕೆ ವೇಳೆ ಕಲ್ಲು ಬಂಡೆ ಬಿದ್ದು ಕಾರ್ಮಿಕ ಸಾವು ಪ್ರಕರಣ
- ಸಾವನ್ನಪ್ಪಿ 24 ಗಂಟೆ ಬಳಿಕ ಬಂಡೆಯಡಿ ಪತ್ತೆಯಾದ ಮೃತ ದೇಹ
- ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಮಾಲೂರು ಶಾಸಕ ಕೆ.ವೈ. ನಂಜೇಗೌಡ
ಕಲ್ಲುಗಣಿಗಾರಿಕೆ ವೇಳೆ ಕಲ್ಲು ಬಂಡೆ ಬಿದ್ದು ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಾವನ್ನಪ್ಪಿದ 24 ಗಂಟೆ ಬಳಿಕ ಆತನ ಮೃತ ದೇಹ ಬಂಡೆಯಡಿ ಪತ್ತೆಯಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕು ಹಳೇಪಾಳ್ಯ ಬಳಿ ಈ ಘಟನೆ ನಡೆದಿದೆ. ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದ ಪ್ರವೀಣ್ ಮೃತಪಟ್ಟ ದುರ್ದೈವಿ.
ಕಲ್ಲುಗಣಿಗಾರಿಕೆ ವೇಳೆ ಇಟಾಚಿ ಮೇಲೆ ಕಲ್ಲು ಬಂಡೆ ಬಿದ್ದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಸ್ಥಳದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಆಗ್ನಿ ಶಾಮಕ ದಳ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರೆದಿದೆ.