ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಈಗ ‘ಕೂಲಿ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಕರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಕನ್ನಡದ ನಟ ಉಪೇಂದ್ರ ನಟಿಸುತ್ತಿದ್ದಾರೆ. ರಚಿತಾ ರಾಮ್ ಕೂಡ ಬಣ್ಣಹಚ್ಚಿದ್ದಾರೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ‘ಜೈಲರ್’-2 ಸಿನಿಮಾ ಬಗ್ಗೆ ಬಹಳ ಚರ್ಚೆ ನಡೀತಿದೆ. ರಜನಿಕಾಂತ್ ಹುಟ್ಟುಹಬ್ಬದ ದಿನವೇ ‘ಜೈಲರ್’-2 ಸಿನಿಮಾ ಘೋಷಣೆ ಆಗುತ್ತದೆ ಎಂದು ಭಾವಿಸಲಾಗಿತ್ತು. ಅದಕ್ಕಾಗಿ ಪ್ರೋಮೊ ಶೂಟ್ ಕೂಡ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಯಾಕೋ ತಲೈವಾ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಸಿಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭರ್ಜರಿ ಟ್ರೀಟ್ ಸಿದ್ಧವಾಗಿದೆ.
2 ನಿಮಿಷ 23 ಸೆಕೆಂಡ್ಗಳ ಪ್ರೋಮೊವನ್ನು ಚಿತ್ರತಂಡ ಸಿದ್ಧಪಡಿಸಿದೆ. 4 ನಿಮಿಷ 3 ಸೆಕೆಂಡ್ಗಳ ಮತ್ತೊಂದು ಪ್ರೋಮೊ ಕೂಡ ಸೆನ್ಸಾರ್ ಆಗಿದೆ. ಹಾಗಾಗಿ ಅಭಿಮಾನಿಗಳಿಗೆ ಡಬಲ್ ಧಮಾಕ. ನೆಲ್ಸನ್ ನಿರ್ದೇಶನದಲ್ಲಿ ಮತ್ತೊಮ್ಮೆ ಜೈಲರ್ ಮುತ್ತುವೇಲ್ ಪಾಂಡಿಯನ್ ಆಗಿ ಸೂಪರ್ ಸ್ಟಾರ್ ಅಬ್ಬರಿಸುವುದು ಪಕ್ಕಾ ಆಗಿದೆ. ಈಗಾಗಳೇ ಪ್ರೋಮೊ ಸೆನ್ಸಾರ್ ಮುಗಿಸಿದೆ. ಆಯ್ದ ಚಿತ್ರಮಂದಿರಗಳಲ್ಲಿ ‘ಜೈಲರ್’-2 ಅನೌನ್ಸ್ಮೆಂಟ್ ಪ್ರೋಮೊ ಪ್ರದರ್ಶನಗೊಳ್ಳಲಿದೆ. ಒಂದೂವರೆ ವರ್ಷದ ಹಿಂದೆ ಬಂದಿದ್ದ ‘ಜೈಲರ್’ ಸಿನಿಮಾ ಬಾಕ್ಸಾಫೀಸ್ ಅಲುಗಾಡಿಸಿತ್ತು .
ರಜನಿಕಾಂತ್ ಜೊತೆ ಕನ್ನಡ ನಟ ಶಿವರಾಜ್ಕುಮಾರ್, ಮಲಯಾಳಂ ನಟ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ನರಸಿಂಹ ಆಗಿ ಶಿವಣ್ಣನ ಆರ್ಭಟಕ್ಕೆ ಇಡೀ ದೇಶವೇ ನಿಬ್ಬೆರಗಾಗಿತ್ತು. ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕೆ ಬೆಂಬಲ ನೀಡಿ ಎಲ್ಲರ ಗಮನ ಸೆಳೆದಿತ್ತು. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ‘ಜೈಲರ್’ ಸಿನಿಮಾ ನಿರ್ಮಾಣವಾಗಿತ್ತು. ಸಿನಿಮಾ 600 ಕೋಟಿ ರೂ.ಗೂ ಅಧಿಕ ಗಳಿಸಿತ್ತು. ಚಿತ್ರದಿಂದ ಬಂದ ಲಾಭದಲ್ಲಿ ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ದ್ಗೆ ನಿರ್ಮಾಪಕರು ಕಾರು ಗಿಫ್ಟ್ ಕೊಟ್ಟಿದ್ದರು. ಲಾಭದಲ್ಲಿ ಪಾಲು ಹಂಚಿದ್ದರು. ಜೊತೆಗೆ ಸೀಕ್ವೆಲ್ ಬಗ್ಗೆ ಚರ್ಚಿಸಿ ಅಡ್ವಾನ್ಸ್ ಸಹ ಕೊಟ್ಟಿದ್ದರು. ಇದೀಗ ಸೀಕ್ವೆಲ್ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ ಎಂಬ ಸುದ್ದಿ ಹರಿದಾಡ್ತಿದೆ.
ಇನ್ನೂ ‘ಜೈಲರ್’ ಪ್ರೀಕ್ವೆಲ್ ಬರುತ್ತದೆ ಎನ್ನಲಾಗಿತ್ತು. ಆದರೆ ಸೀಕ್ವೆಲ್ ಶುರುವಾಗುತ್ತಿದೆ. ಇದೇ ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಹಿನ್ನೆಲೆಯ ಕಥೆಯನ್ನು ಕಟ್ಟಿಕೊಡುವ ಸಾಧ್ಯತೆಯಿದೆ. ಈ ಬಾರಿ ಕೂಡ ನರಸಿಂಹ ಹಾಗೂ ಮ್ಯಾಥ್ಯು ಪಾತ್ರ ಇರುವ ಸಾಧ್ಯತೆಯಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 14ರ ಸಂಜೆ 6 ಗಂಟೆಗೆ ‘ಜೈಲರ್’-2 ಅನೌನ್ಸ್ಮೆಂಟ್ ಪ್ರೋಮೊ ಹೊರಬೀಳಲಿದೆ. ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಕೂಡ ಅಭಿಮಾನಿಗಳು ಇದರ ಝಲಕ್ ನೋಡಿ ಎಂಜಾಯ್ ಮಾಡಬಹುದು. ನಟ ಶಿವರಾಜ್ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ಹೋಗಿದ್ದಾರೆ. ಸರ್ಜರಿ ನಂತರ ಚೇತರಿಸಿಕೊಳ್ಳುತ್ತಿದ್ದಾರೆ.
ಜನವರಿ 26ರಂದು ಬೆಂಗಳೂರಿಗೆ ಮರಳಿ ಬರಳಿ ಬರಲಿದ್ದಾರೆ. ‘ಜೈಲರ್’-2 ಪ್ರೋಮೊದಲ್ಲಿ ನರಸಿಂಹ ಪಾತ್ರದ ಬಗ್ಗೆಯೂ ಸುಳಿವು ಸಿಗುವ ಸಾಧ್ಯತೆಯಿದೆ. ಸಣ್ಣ ಟೀಸರ್ ಶೂಟ್ ಮಾಡಿ ‘ಜೈಲರ್’ ಚಿತ್ರವನ್ನು ಕೂಡ ಘೋಷಿಸಲಾಗಿತ್ತು. ಬಹಳ ದಿನಗಳ ಬಳಿಕ ಒಂದು ಮಾಸ್ ಚಿತ್ರದ ಮೂಲಕ ರಜನಿಕಾಂತ್ ಪ್ರೇಕ್ಷಕರನ್ನು ರಂಜಿಸಿದ್ದರು. ಬಳಿಕ ಬಂದ ‘ವೆಟ್ಟೆಯಾನ್’ ಅಷ್ಟಾಗಿ ಹಿಟ್ ಕೊಟಲಿಲ್ಲ. ಆದರೆ ‘ಕೂಲಿ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ 70%ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ ಎಂದು ಸ್ವತಃ ರಜನಿಕಾಂತ್ ಹೇಳಿದ್ದಾರೆ. ‘ಕೂಲಿ’ ಚಿತ್ರದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ಮೇ 1ರಂದು ಕಾರ್ಮಿಕರ ದಿನಾಚರಣೆ ವಿಶೇಷವಾಗಿ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ.
ಇನ್ನೂ ರಜನೀಕಾಂತ್ ಹಾಗೂ ಶಿವರಾಜ್ಕುಮಾರ್ ಅಭಿಮಾನಿಗಳು ಜೈಲರ್ ಸಿನಿಮಾ ನೋಡಿ ಬಹಳ ಎಂಜಾಯ್ ಮಾಡಿದ್ದರು. ನಟ ಶಿವರಾಜ್ಕುಮಾರ್ ನಟನೆ ನೋಡಿ ಇಡೀ ದೇಶವೇ ಶಿವಣ್ಣನಿಗೆ ಪ್ರೀತಿಯ ಮಹಾಪೂರವೇ ಹರಿಸಿತ್ತು. ಇನ್ನೂ ಬೇರೆ ಇಂಡಸ್ಟ್ರೀಯ ನಟ ನಟಿಯರು ಇವರ ನಟನೆಗೆ ಮೆಚ್ಚಿಗೆ ವ್ಯಕ್ತಪಡಿಸಿತ್ತು.