ಬೆಳಗಾವಿ ಖಡಕ್ ಪಾಲಿಟಿಕ್ಸ್ Vs ರಾಮನಗರ ರಗಡ್ ರಾಜಕೀಯ ರಾಜ್ಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಉತ್ತರ-ದಕ್ಷಿಣದ 2 ಪ್ರಭಾವಿ ಕುಟುಂಬಗಳ ಮಧ್ಯೆ ಧಗಧಗ ದಂಗಲ್ ಜೋರಾಗಿ ನಡೆಯಿತ್ತಿದೆ. ಡಿ.ಕೆ ಶಿವಕುಮಾರ್ ರನ್ನ ಬದಲಾಯಿಸಿಯೇ ಸಿದ್ಧ ಎಂಬಂತೆ ಸತೀಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ. ನಾನು ಬಗ್ಗೋ ಮಗನೇ ಅಲ್ಲ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೆಡ್ಡು ಹೊಡೆದಿದ್ದಾರೆ. ಇಬ್ಬರು ‘ಹಠ’ಮಾರಿಗಳ ಆಟಕ್ಕೆ ನಲುಗುತ್ತಿದೆ ರಾಜ್ಯ ಕಾಂಗ್ರೆಸ್ ಪಕ್ಷ.
ರಾಜ್ಯ ಕಾಂಗ್ರೆಸ್ ನಲ್ಲಿ ದಿನಕ್ಕೊಂದು ಹೇಳಿಕೆ.. ಆ ಕಡೆಯಿಂದಲೂ ಟೀಕೆ ಜೋರಾಗಿ ನಡೆಯುತ್ತದೆ. ಮೀಡಿಯಾ ಮುಂದೆ ಸತೀಶ್ ಜಾರಕಿಹೊಳಿಯಿಂದ ಬದಲಾವಣೆ ಟಾಕ್ ಹೊರಬಿದ್ದಿದೆ. ಸತೀಶ್ ಮೀಡಿಯಾ ಬೈಟ್ ವಿರುದ್ಧ ಡಿ.ಕೆ ಶಿವಕುಮಾರ್ ಫುಲ್ ವೈಲೆಂಟ್ ಆಗಿದ್ದಾರೆ. ದೆಹಲಿಯಿಂದ ವಾಪಸ್ ಆಗ್ತಿದ್ದಂತೆ ಹುದ್ದೆ ಬಗ್ಗೆ ಡಿಕೆಶಿಯಿಂದಲೂ ಫೈಟ್ ನಡೆಯಲಿದೆ. ಮೀಡಿಯಾ ಮುಂದೆ ಮಾತ್ನಾಡಿದ್ರೆ ಹುದ್ದೆ ಸಿಗೋದಿಲ್ಲ ಅಂತ ಟಾಂಟ್ ಬೇರೆ ಕೊಟ್ಟಿದ್ದಾರೆ. ಸಿಗೋವರೆಗೂ ಸುಮ್ಮನಿರಲ್ಲ ಅಂತ ಸಾಹುಕಾರ್ ರಿಂದಲೂ ಕೌಂಟರ್ ಅಟ್ಯಾಕ್ ಆಗಿದೆ. ಸೇರಿಗೆ ಸವ್ವಾಸೇರು… ಎನ್ನುತ್ತಿರೋ ನಾಯಕರು.. ಆತಂಕದಲ್ಲಿ ಕಾಮಗ್ರೆಸ್ ಶಾಸಕರು ಎಂಬಂತಿದೆ ಸದ್ಯದ ಪರಿಸ್ಥಿತಿ. ಮುಂದೆ ಏನಾಗುತ್ತೋ ಏನೋ ಅನ್ನೋ ಭಯದಲ್ಲಿ ಹಿರಿಯ ನಾಯಕರು ಒದ್ದಾಡುತಿದ್ದಾರೆ.
ಪಕ್ಷದಲ್ಲಿ ಪ್ರಮುಖ ಹುದ್ದೆಗಳು ಅಂಗಡಿಯಲ್ಲಿ ಸಿಗುವುದಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳೇನು ಸ್ಥಾನಮಾನ ಕೊಡಿಸುವುದಿಲ್ಲ. ನಮ್ಮ ಕೆಲಸ ನೋಡಿ ಪಕ್ಷದ ನಾಯಕರು ಹುದ್ದೆ ನೀಡುತ್ತಾರೆ! ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಖಾರವಾದ ಪ್ರತಿಕ್ರಿಯೆಯಿದು.
ಈ ಬಗ್ಗೆ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಮಾಡುವ ಕೆಲಸಮತ್ತು ಶ್ರಮವನ್ನು ಪಕ್ಷದನಾಯಕರುಗುರುತಿಸಿ ಸೂಕ್ತ ಹುದ್ದೆಗಳನ್ನು ನೀಡುತ್ತಾರೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮ ಗಳು ಸ್ಥಾನಮಾನ ಕೊಡಿಸುವುದಿಲ್ಲ. ಇದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು. ಸದ್ಯಕ್ಕೆ ನಮಗೆ ಪಕ್ಷ ಸಂಘಟನೆ ಮುಖ್ಯ. ಪಕ್ಷ ಸಂಘಟಿಸಿ, ಉಳಿಸಿ, ಬೆಳೆಸುವ ಕೆಲಸವಾಗಬೇಕು. ಪಕ್ಷದಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬುದ್ದಿವಾದ ಹೇಳಿದ್ದಾರೆ.
ಯಾರೂ ಬಹಿರಂಗ ಚರ್ಚೆ ಮಾಡಬಾರದು ಎಂಬ ಸೂಚನೆ ನೀಡಿದ್ದಾರೆ. ಪಕ್ಷದ ವಿಚಾರಗಳನ್ನು ಮಾಧ್ಯಮಗಳ ಮುಂದೆ ಮಾತನಾಡುವಂತಿಲ್ಲ. ಏನೇ ಇದ್ದರೂ ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ, ಮುಖ್ಯ ಮಂತ್ರಿಗಳು ಅಥವಾ ನನ್ನ ಬಳಿ ಬಂದು ಚರ್ಚಿಸಲಿ. ಕಾಂಗ್ರೆಸ್ ಮಾತ್ರವಲ್ಲದೆ, ಬಿಜೆಪಿ, ಜೆಡಿಎಸ್ ಸೇರಿ ಎಲ್ಲ ಪಕ್ಷಗಳಲ್ಲೂ ಆಂತರಿಕ ವಿಚಾರವನ್ನು ಬಹಿರಂಗವಾಗಿ ಮಾತನಾಡಬಾರದು ಎಂದು ಹೇಳಿದರು.
ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಇದರಿಂದ ವ್ಯತಿರಿಕ್ತ ಪರಿಣಾಮವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕೇವಲಡಿ.ಕೆ.ಶಿವಕುಮಾರ್ ತಂದಿದ್ದಲ್ಲ. ಕಾಠ್ಯಕರ್ತರು, ಮತದಾರರು ನಮ್ಮ ಮೇಲೆ ಅಪಾರ ವಿಶ್ವಾವಿಟ್ಟು ಅಧಿಕಾರ ನೀಡಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕು ಹಾಗೂ ಉಳಿಸಿಕೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಎಂಬುದು ಕಾರ್ಯಕರ್ತರು ಮತ್ತು ಮತದಾರರ ಪಕ್ಷ. ಅದಕ್ಕೆ ತನ್ನದೇ ಆದ ಇತಿಹಾಸವಿದೆ. ಯಾರು ಇರಲಿ, ಹೋಗಲಿ ತನ್ನನ್ನು ತಾನು ಉಳಿಸಿಕೊ ಳ್ಳುವ ಶಕ್ತಿ ಪಕ್ಷಕ್ಕಿದೆ. ಹೀಗಾಗಿ ಮಾಧ್ಯಮಗಳೆದುರು ಮಾತನಾಡುವುದಕ್ಕಿಂತ ಪಕ್ಷ ಮುಖ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದೂ ಸೂಚ್ಯವಾಗಿ ತಿಳಿಸಿದರು. ಪಕ್ಷದ ಬಗ್ಗೆ ಯಾರಿಗಾದರೂ ಸಮಸ್ಯೆಗಳಿದ್ದರೆ, ಹೈಕಮಾಂಡ್ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಲಿ ಎಂದು ಸಲಹೆ ನೀಡಿದರು.