- ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಕೆಆರ್ ಎಸ್ ಡ್ಯಾಂ ಗೆ ಒಳಹರಿವು ಹೆಚ್ಚಳ
- ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕಾವೇರಿ ಜಾಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಕೆಆರ್ ಎಸ್ ಡ್ಯಾಂ ಗೆ ಒಳಹರಿವು ಹೆಚ್ಚಳವಾಗಿದೆ. ಹವಾಮಾನ ಇಲಾಖೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಮುಂಗಾರು ಮಳೆಯಿಂದಾಗಿ ಕೆಆರ್ ಎಸ್ ಡ್ಯಾಮ್ ಗೆ ಇಂದು ( ಶನಿವಾರ ) 3,365 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕೆಆರ್ ಎಸ್ ಡ್ಯಾಂ 124.80 ಅಡಿ ಇದ್ದು, ಆಗಲೇ 82.30 ಅಡಿ ನೀರು ಶೇಖರಣೆಯಾಗಿದೆ. ಉತ್ತಮ ಮಳೆಯಾಗುತ್ತಿರುವುದಕ್ಕೆ ಡ್ಯಾಂ ಗೆ ಒಳಹರಿವು ಹೆಚ್ಚಳವಾಗಿದ್ದು, 528 ಕ್ಯೂಸೆಕ್ ಹೊರಹರಿವು ಇದೆ. ನಿನ್ನೆ ಕೆಆರ್ ಎಸ್ ಡ್ಯಾಂ ಗೆ 2,509 ಕ್ಯೂಸೆಕ್ ಒಲಹರಿವು ಇತ್ತು. 24 ಗಂಟೆಗಳಲ್ಲಿ 856 ಕ್ಯೂಸೆಕ್ ನೀರು ಹೆಚ್ಚಳವಾಗಿದೆ.