ಕಳೆದ ವಾರದಿಂದ ಕಿರ್ಗಿಸ್ತಾನದ ಜನರು ಹಾಗೂ ವಿದೇಶಿಯರ ನಡುವೆ ಹಿಂಸಾತ್ಮಕ ಘರ್ಷಣೆ ಮುಂದುವರೆದಿತ್ತು. ಈ ಹಿನ್ನೆಲೆ ಪಾಕಿಸ್ತಾನ ಸರ್ಕಾರ ಶನಿವಾರ ಕಿರ್ಗಿಸ್ತಾನ್ನಿಂದ 180 ವಿದ್ಯಾರ್ಥಿಗಳು ಸೇರಿ 450 ಮಂದಿಯನ್ನು ವಾಪಾಸ್ ಕರೆಸಲಾಗಿದೆ. ಇಂದು ಕಿರ್ಗಿಸ್ತಾನ್ ನಿಂದ 180 ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ಕರೆತರಲು ಮೂರು ವಿಶೇಷ ವಾಣಿಜ್ಯ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಹೇಳಿದ್ದಾರೆ.