- ಪ್ರವಾಹಕ್ಕೆ ಸಿಲುಕಿ ಐವರು ಯೋಧರ ಸಾವು
- ತಾಲೀಮು ನಡೆಸುತ್ತಿದ್ದ ವೇಳೆ ಘಟನೆ
- ಬೋಧಿ ನದಿಯಲ್ಲಿ ದಿಢೀರ್ ಪ್ರವಾಹ
ಪ್ರವಾಹದಲ್ಲಿ ಐವರು ಭಾರತೀಯ ಯೋಧರು ಕೊಚ್ಚಿ ಹೋಗಿದ್ದಾರೆ. ಲಡಾಖ್ನ ನ್ಯೂಮಾ-ಚುಶುಲ್ ಪ್ರದೇಶದಲ್ಲಿ ಘಟನೆ ನಡೆದಿದೆ. ಭಾರತೀಯ ಸೈನ್ಯವು ತಾಲೀಮು ನಡೆಸುತ್ತಿದ್ದ ವೇಳೆ ಪ್ರವಾಹದಿಂದ ಐವರು ಯೋಧರು ಸಾವನ್ನಪ್ಪಿದ್ದಾರೆ. ಲೇಜ್ನಿಂದ 148 ಕಿಮೀ ದೂರದಲ್ಲಿರುವ, ಬೋಧಿ ನದಿಯಲ್ಲಿ ಮುಂಜಾನೆ ಸೇನಾ ಅಭ್ಯಾಸದ ಭಾಗವಾಗಿ ಟ್ಯಾಂಕ್ಗಳು ನದಿಯನ್ನು ದಾಟುತ್ತಿದ್ದಾಗ ಪ್ರವಾಹ ಸಂಭವಿಸಿದೆ. ಇದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು ಟಿ-72 ಟ್ಯಾಂಕ್ ಮುಳುಗಡೆಯಾಗಿದೆ. ಐವರು ಯೋಧರು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.