ಶಿಗ್ಗಾಂವಿಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಟಕ್ಕರ್ ಕೊಡ್ತಾರ, ಬಸವರಾಜ ಬೊಮ್ಮಾಯಿ ಮಗನಿಗೆ ಸವದಿ ಸಂಕಷ್ಟ ಫಿಕ್ಸಾ? ಸದ್ದಿಲ್ಲದೇ ಲಕ್ಷ್ಮಣ್ ಸವದಿಯನ್ನ ಅಖಾಡಕ್ಕಿಳಿಸಿದ್ದೇಕೆ ಕಾಂಗ್ರೆಸ್? ಲಕ್ಷ್ಮಣ್ ಸವದಿ ಮೂಲಕವೇ ಶಿಗ್ಗಾಂವಿ ಕೈವಶಕ್ಕೆ ರಣತಂತ್ರ ರೂಪಿಸುತ್ತಿದ್ಯಾ ಎಂಬದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಬಿಜೆಪಿಯಲ್ಲಿದ್ದರು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಅವರು. ಹಾಗಾಗಿ ಬಿಜೆಪಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಸವದಿಗೆ ಅರಿವಿದೆ. ಬಿಜೆಪಿ ಎಲೆಕ್ಷನ್ ಸ್ಟ್ರಾಟಜಿ ಬಗ್ಗೆ ಸವದಿಗೆ ಮಾಹಿತಿ ಇದೆ. ಬೂತ್ ಮಟ್ಟದಲ್ಲಿ ಬಿಜೆಪಿ ಹೇಗೆ ಕೆಲಸ ಮಾಡಲಿದೆ ಎಂಬುದು ಸವದಿಗೆ ತಿಳಿದಿದೆ. ಚುನಾವಣಾ ಸಮಯದಲ್ಲಿ ಜಾತಿ ಸಮೀಕರಣ ಹೇಗಿರಲಿದೆ ಎಂಬ ಎಲ್ಲಾ ಬಿಜೆಪಿಯ ರಣತಂತ್ರದ ಆಳ- ಅಗಲವನ್ನ ಅರಿತಿರುವ ಲಕ್ಷ್ಮಣ್ ಸವದಿಯನ್ನ ಬೊಮ್ಮಾಯಿ ಮಗನಾದ ಭರತ್ ಬೊಮ್ಮಾಯಿಯನ್ನ ಮಣಿಸಲು ಕಾಂಗ್ರೆಸ್ ಸವದಿಗೆ ಟಾಸ್ಕ್ ನೀಡಿದೆ. ಈ ತಂತ್ರಗಾರಿಕೆಯ ಸೂತ್ರದಾರಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎನ್ನಲಾಗಿದೆ.
ಡಿಕೆಶಿ ಹುಕುಂ ಬರುತ್ತಿದ್ದಂತೆ ಶಿಗ್ಗಾಂವಿ ಫೀಲ್ಡಿಗಿಳಿದಿದ್ದಾರೆ ಹಾಗೂ ಶಿಗ್ಗಾಂವಿ ಉಪಚುನಾವಣೆ ಗೆಲುವಿಗಾಗಿ ಸಭೆ ಮಾಡಿದ್ದಾರೆ ಸವದಿ. 3 ಪುರಸಭೆ, 6 ಜಿಲ್ಲಾ ಪಂಚಾಯ್ತಿ, 23 ತಾಲೂಕು ಪಂಚಾಯ್ತಿ ಸಭೆ ನಡೆಸಿ ಚುನಾವಣಾ ತಂತ್ರಗಾರಿಕೆ ವಿವರಿಸಿದ್ದಾರೆ ಲಕ್ಷ್ಮಣ್ ಸವದಿ. ಸ್ಥಳೀಯ ಪದಾಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟಿದ್ದಾರೆ. ಒಟ್ಟಾರೆ ಲಕ್ಷ್ಮಣ್ ಸವದಿ ಎಂಟ್ರಿಯಿಂದ ಬಿಜೆಪಿ ಪಾಳಯದಲ್ಲಿ ತಳಮಳ ಶುರುವಾಗಿದೆ.