ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾಗಿರುವ ಮೂವರ ಶೋಧ ಕಾರ್ಯಾಚರಣೆ ವಿಫಲವಾಗಿರುವುದರಿಂದ ಕೇರಳದ ತ್ರಿಶೂರ್ ತಾಂತ್ರಿಕ ತಜ್ಞರಿಂದ ಮೌಂಟೆಂಡ್ ಡ್ರೆಜಿಂಗ್ ಕಾರ್ಯಾಚರಣೆ ಬಗ್ಗೆ ಜಿಲ್ಲಾಡಳಿತ ಲಿಖಿತ ವರದಿ ಕೇಳಿದೆ. ವರದಿ ಪೂರಕವಾಗಿದ್ದಲ್ಲಿ ಸದ್ಯವೇ ಆ ರೀತಿಯ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆ ಇದೆ. ಸದ್ಯಕ್ಕೆ ಶಿರೂರಿನಲ್ಲಿ ಸಂಚಾರ ವ್ಯವಸ್ಥೆ ಪುನಾರಂಭಕ್ಕೆ ಅವಕಾಶ ಮಾಡಿಕೊಡುವ ಕಾರ್ಯ ನಡೆದಿದೆ. ಗುಡ್ಡ ಕುಸಿತದಿಂದ ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣು, ಬಂಡೆಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ.