ಕನ್ನಡದ ಹಿರಿಯ ಡಾ.ಲೀಲಾವತಿ ಅವರ ಸ್ಮಾರಕವನ್ನು ಸಚಿವ ಕೆ.ಎಚ್ ಮುನಿಯಪ್ಪ ಉದ್ಘಾಟನೆ ಮಾಡಿದರು. ಲೀಲಾವತಿಯವರ ಮಗ ನಟ ವಿನೋದ್ ರಾಜ್ ಅವರು ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಲೀಲಾವತಿಯವರ ಸ್ಮಾರಕವನ್ನು ನಿರ್ಮಿಸಿದ್ದಾರೆ. ಈ ಸ್ಮಾರಕಕ್ಕೆ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ಹೆಸರನ್ನು ಇಟ್ಟಿದ್ದಾರೆ.
ಸ್ಮಾರಕ ಉದ್ಘಾಟನೆಯ ಸಮಾರಂಭಕ್ಕೆ ಕುಟುಂಬಸ್ಥರು ಹಾಜರಿದ್ದರು. ನಂತರ ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿಸಲಾಗಿದೆ. ಸದಾ ತಾಯಿಯ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಇದೀಗ ಅಮ್ಮನಿಗಾಗಿ ದೇಗುಲವನ್ನೇ ಕಟ್ಟಿಸಿದ್ದಾರೆ. ಇಲ್ಲಿ ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗಿನ ಸುಮಾರು 60ಕ್ಕೂ ಹೆಚ್ಚು ಪೋಟೋಗಳನ್ನು ಇಡಲಾಗಿದೆ.