ಚಳಿಗಾಲವು ನಿಮ್ಮ ಹೃದಯಕ್ಕೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಕಡಿಮೆ ತಾಪಮಾನವು ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು, ರಕ್ತದೊತ್ತಡವನ್ನು ಹೆಚ್ಚಿಸಬಹುದು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.
ಕೆಲವು ಯೋಗಾಸನಗಳನ್ನು ಬೆಳಗ್ಗೆ ಮತ್ತು ಸಂಜೆ ಮಾಡಿದರೆ, ನಿಮ್ಮ ಆರೋಗ್ಯವನ್ನು ನೀವು ಸುರಕ್ಷಿತವಾಗಿ ರಕ್ಷಿಸಿಕೊಳ್ಳಬಹುದು, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಮಂದ ವಾತಾವರಣದ ಹೊರತಾಗಿಯೂ ನಿಮ್ಮನ್ನು ಸಕಾರಾತ್ಮಕ ಮನಸ್ಥಿತಿಯಲ್ಲಿ ಇರಿಸಬಹುದು. ಬೆಚ್ಚಗಾಗಲು ಮತ್ತು ಸಕ್ರಿಯವಾಗಿರಲು ಇದು ತುಂಬಾನೇ ಸಹಾಯ ಮಾಡುತ್ತದೆ.
ಸಂಜೆಯ ಸಮಯ ದೇಹ ಹಾಗೂ ಮನಸ್ಸಿನ ನೆಮ್ಮದಿಗೆ ಅತ್ಯುತ್ತಮವಾದುದು. ಈ ವೇಳೆ ಸರಿಯಾದ ಯೋಗಾಭ್ಯಾಸ ದೇಹದ ತಾಪಮಾನವನ್ನು ನಿಯಂತ್ರಿಸಿ ಆರೋಗ್ಯವನ್ನು ನಿರ್ವಹಿಸಲು ಸಹಾಯಕವಾಗಿದೆ. ಕೆಲವು ಮುಖ್ಯ ಯೋಗಾಸನಗಳನ್ನು ಪ್ರತಿದಿನ ಕೇವಲ 20-30 ನಿಮಿಷಗಳಲ್ಲಿ ಅಭ್ಯಾಸ ಮಾಡುವ ಮೂಲಕ ದೇಹವು ಶಕ್ತಿಯುತವಾಗುತ್ತದೆ ಮತ್ತು ಉಷ್ಣತೆಗೆ ತಕ್ಕಂತೆ ಸ್ಥಿರವಾಗಿರಲು ನೆರವಾಗುತ್ತದೆ.
ಸೂರ್ಯನಮಸ್ಕಾರ:
ಈ ಆಸನಗಳನ್ನು ದಿನದ ಪ್ರಾರಂಭದಲ್ಲೂ ಮತ್ತು ಸಂಜೆ ಯೋಗ ಅಭ್ಯಾಸದಲ್ಲೂ ಮಾಡುವುದರಿಂದ ದೇಹವನ್ನು ತಾಪಮಾನ ತಟ್ಟುವಿಕೆಯಿಂದ ತಪ್ಪಿಸಬಹುದು.
ಭುಜಂಗಾಸನ:
ಈ ಯೋಗಾಸನವು ಬೆನ್ನಿನ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ, ರಕ್ತಪ್ರಸರಣ ಉತ್ತಮಗೊಳ್ಳುವಂತೆ ಮಾಡುತ್ತದೆ.
ಧನುರಾಸನ:
ಧನುರಾಕಾರದ ಸ್ಥಿತಿಯಲ್ಲಿರುವ ಈ ಆಸನವು ದೇಹದಲ್ಲಿ ಶಾಖವನ್ನು ಉಂಟು ಮಾಡುತ್ತದೆ. ಈ ಆಸನ ಶ್ವಾಸಕೋಶದ ಕಾರ್ಯ ಚಟುವಟಿಕೆ ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ.
ಕಪಾಲಭಾತಿ ಪ್ರಾಣಾಯಾಮ:
ನಿತ್ಯವೂ ಈ ಆಸನವು ಶ್ವಾಸ ಅಭ್ಯಾಸ ಮಾಡುವ ಮೂಲಕ ದೇಹದ ಒಳಗಿನ ತಾಪಮಾನ ಸಮತೋಲನವಾಗಿರುತ್ತದೆ.
ಶವಾಸನ:
ಈ ಆಸನವು ದಿನದ ಅಂತಿಮ ಕ್ಷಣದಲ್ಲಿ ದೇಹ ಮತ್ತು ಮನಸ್ಸನ್ನು ಆರಾಮ ಮಾಡುತ್ತದೆ.ಈ ವಿಶ್ರಾಂತಿ ಭಂಗಿಯು ಮನಸ್ಸನ್ನು ಶಾಂತಗೊಳಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹದ ಶಾಖವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಎಲ್ಲಾ ಇತರ ಆಸನಗಳು ಮುಗಿದ ನಂತರ ಪ್ರತಿದಿನ ಸಂಜೆ ಈ ಭಂಗಿಯಲ್ಲಿ 5 ರಿಂದ 10 ನಿಮಿಷಗಳ ಕಾಲ ಹಾಗೆಯೇ ಇರಿ.
ಈ ಯೋಗಾಸನಗಳನ್ನು ಸರಿಯಾಗಿ ಅಭ್ಯಾಸ ಮಾಡುವುದು ದೇಹಕ್ಕೆ ಅಗತ್ಯವಾದ ಉಷ್ಣತೆಯನ್ನು ಹೆಚ್ಚಿಸುತ್ತಿದ್ದು ದೈನಂದಿನ ಚಟುವಟಿಕೆಗೆ ಸದೃಢತೆ ನೀಡುತ್ತದೆ. ಶೀತ ಹವಾಮಾನದಲ್ಲಿಯೂ ದೇಹವನ್ನು ದೀರ್ಘಕಾಲವಾಗಿ ಬೆಚ್ಚಗಿಡಲು ಈ ಆಸನಗಳು ಮಹತ್ವದ ಪಾತ್ರ ವಹಿಸುತ್ತದೆ.