2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ಹೋರಾಟ ರಾಜ್ಯವ್ಯಾಪಿ ನಡೆಯುತ್ತಿದೆ. ಆದರೆ ಈ ಹೋರಾಟಕ್ಕೆ ಸಮುದಾಯದ ಶಾಸಕರು ಬೆಂಬಲ ನೀಡುತ್ತಿಲ್ಲವ್ಯಾಕೆ.? ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ. ಲಿಂಗಾಯತ ಶಾಸಕರೇ ಮೀಸಲಾತಿ ಹೋರಾಟ ಬರೀ ಕಾಟಾಚಾರವಾಯ್ತೆ..? ಲಾಠಿ ಪ್ರಹಾರ ಆದ್ರು ಗಪ್ ಚುಪ್ ಅಂತಿರೋದ್ಯಾಕೆ ಸಮುದಾಯದ ಶಾಸಕರು ಎಂದು ಲಿಂಗಾಯತ ಸಮುದಾಯದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.
224 ಶಾಸಕರು ಪೈಕಿ ಬರೋಬ್ಬರಿ 56 ಲಿಂಗಾಯತ ಶಾಸಕರು ಸದನದಲ್ಲಿದ್ದಾರೆ. ಅದರಲ್ಲಿ 35-ಕಾಂಗ್ರೆಸ್, 19-ಬಿಜೆಪಿ, 2 ಜೆಡಿಎಸ್ ಶಾಸಕರಿದ್ರು ಗಪ್ ಚುಪ್ ಯಾಕೆ? ಬೆರಳಣಿಗೆ ಶಾಸಕರಿಗಷ್ಠೆ ಬೇಕಾಯ್ತೇ 2 ಎ ಮೀಸಲಾತಿ ಹೋರಾಟ. ಸಮುದಾಯದ ಜನರಿಗೆ ಮೀಸಲಾತಿ ಕೊಡಿಸಲು ಮೀನಮೇಷಾ ಯಾಕೆ.? ಎಂದು ಸಮುದಾಯದ ಜನರು ಕೇಳುತ್ತಿದ್ದಾರೆ.
ಮೀಸಲಾತಿ ಹೋರಾಟದಲ್ಲಿ ಬಸವನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ್, ಲಕ್ಷ್ಮೀ ಹೆಬ್ಬಾಳಕರ್, ಲಕ್ಷ್ಮಣ ಸವದಿ, ಬಿ ವೈ ವಿಜಯೇಂದ್ರ, ವಿಜಯಾನಂದ ಕಾಶಪ್ಪನವರ್ ಸೇರಿ ಬೆರಳೆಣಿ ಶಾಸಕರು ಮಾತ್ರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಉಳಿದವರು ಹೋರಾಟದಲ್ಲೂ ಭಾಗಿಯಾಗ್ತಿಲ್ಲ.. ಬಾಯಿಬಿಟ್ಟು ಮಾತನಾಡ್ತಿಲ್ಲ, ಸಮಾಜದ ಮತ ಪಡೆದು ಹೋರಾಟದಲ್ಲಿ ಭಾಗಿಯಾಗದ ಶಾಸಕರ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಶಾಸಕರ ಮಧ್ಯದ ಭಿನ್ನಾಭಿಪ್ರಾಯಕ್ಕೆ ಸಮುದಾಯದ ಜನರು ಹಿಡಿಶಾಪ ಹಾಕುತ್ತಿದ್ದಾರೆ.