ಬೆಂಗಳೂರು : ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೆಂಬು ಎಂಬ ಕಾಂಗ್ರೆಸ್ನ ಜಾಹೀರಾತಿಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಲೋಕಸಭೆಯ ಚುನಾವಣೆಯ ಮೊದಲ ಹಂತದ ದಿನವೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಚೆಂಬು ಹಾಗೂ ಗ್ಯಾಸ್ ಸಿಲಿಂಡರ್ ಪ್ರದರ್ಶನ ಮಾಡಿದರು.
ಬೆಂಗಳೂರಿನ ರಾಜಾಜಿನಗರದ ಮತಗಟ್ಟೆ ಬಳಿ ಚೆಂಬು ಮತ್ತು ಸಿಲಿಂಡರ್ ಪ್ರದರ್ಶಿಸಿದರು. ರಾಜಾಜಿನಗರದ ಮಂಜುನಾಥ್ ನಗರದಲ್ಲಿರುವ ಗೌತಮ್ ಕಾಲೇಜಿನ ಮತಗಟ್ಟೆ ಬಳಿ ಬಂದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹಾಗೂ ಕಾರ್ಯಧ್ಯಕ್ಷ ಮಂಜುನಾಥ್ ತಂಡ ಚೆಂಬು ಪ್ರದರ್ಶನ ಮಾಡಿದರು. ಜತೆಗೆ ಯುವಕನೊಬ್ಬ ಗ್ರ್ಯಾಜುಯೇಟ್ ಡ್ರೆಸ್ನಲ್ಲಿ ಬಂದು ಕೈಯಲ್ಲಿ ಚೆಂಬು ಹಿಡಿದು ಬಿಜೆಪಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ರು.