ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರಚಾರ ರಂಗೇರಿದ್ದು, ಈಗಾಗಲೇ ಮೊದಲ ಹಂತದ ಲೋಕಸಭೆ ಚುನಾವಣೆ ಮುಗಿದಿದೆ. ಎರಡನೇ ಹಂತದ ಮತದಾನವು ಏಪ್ರಿಲ್ 26 ರಂದು ನಡೆಯಲಿದೆ. ಲೋಕಾ ಚುನಾವಣೆಗೆ ಪ್ರಚಾರ ಬಿರುಸುಗೊಂಡಿದೆ. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಚೊಂಬು v/s ಚಿಪ್ಪು ಫೈಟ್ ಜೋರಾಗಿದೆ. ನಿನ್ನೆ ಹಾಗೂ ಮೊನ್ನೆ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ನೀಡಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು.
ಕಾಂಗ್ರೆಸ್ ಚೊಂಬಿಗೆ, ಬಿಜೆಪಿ ಚಿಪ್ಪು ಕೌಂಟರ್ ನೀಡಿದೆ. ಎಕ್ಸ್ ಖಾತೆಯಲ್ಲಿ ಕಾಂಗ್ರೆಸ್ಗೆ ಕೌಂಟರ್ ಕೊಟ್ಟಿರುವ ಬಿಜೆಪಿ, ಹಲವು ವಿಚಾರ ಉಲ್ಲೇಖ ಮಾಡಿ ಚಿಪ್ಪು ಕೊಟ್ಟ ಕಾಂಗ್ರೆಸ್ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಜೊತೆಗೆ ಕಾಂಗ್ರೆಸ್ನ ಜಾಹೀರಾತು ತಂತ್ರಕ್ಕೆ ಬಿಜೆಪಿಯಿಂದ ಪೋಸ್ಟರ್ ವಾರ್ ಶುರು ಮಾಡಿದೆ.
ಚೊಂಬು ಚಿತ್ರ ಇರುವ ಪೋಸ್ಟರ್ನಲ್ಲಿ ಯುಪಿಎ ಹಗರಣಗಳು, ರಾಜ್ಯ ಸರ್ಕಾರದ ವೈಫಲ್ಯಗಳ ವಿವರ ನೀಡಲಾಗಿದೆ. ಜನತೆಗೆ ಚೊಂಬು ಕೊಟ್ಟಿದ್ದು, ಕಾಂಗ್ರೆಸ್ ಎಂದು ಬಿಂಬಿಸುವ ಪೋಸ್ಟರ್ಗಳನ್ನು ಬಿಜೆಪಿ ಥರ್ಡ್ ಪಾರ್ಟಿ ಪ್ರಚಾರಕರಿಂದ ರಿಲೀಸ್ ಮಾಡಲಾಗಿದೆ. ಜೊತೆಗೆ ಕಾಂಗ್ರೆಸ್ ಡೇಂಜರ್ ಹೆಸರಿನಲ್ಲಿ ಕೂಡ ಜಾಹೀರಾತು ನೀಡಿ ತಿರುಗೇಟು ನೀಡಲಾಗಿದೆ. ರಾಜ್ಯದಲ್ಲಿ ಆಗಿರುವ ಹಲವು ಘಟನೆಗಳ ಉಲ್ಲೇಖ ಮಾಡಿ ಜಾಹೀರಾತು ನೀಡಲಾಗಿದೆ.