- ಐದನೇ ಹಂತದಲ್ಲಿ ಲೋಕಸಭೆ ಚುನಾವಣೆ
- ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ವೋಟ್ ಮಾಡಿದ ಅಕ್ಷಯ್
ಅಕ್ಷಯ್ ಕುಮಾರ್ ಅವರು ಇಷ್ಟು ವರ್ಷ ಕೆನಡಾದ ನಾಗರಿಕತ್ವ ಹೊಂದಿದ್ದರು. ಆ ಕಾರಣಕ್ಕಾಗಿಯೇ ಕೆಲವರು ಅಕ್ಷಯ್ ಕುಮಾರ್ ಅವರನ್ನ ಕೆನಡಿ ಕುಮಾರ್ ಅಂತ ಲೇವಡಿ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಕೂಡ ಮಾಡ್ತಾಯಿದ್ರು. ಆದ್ರೆ ಈ ವರ್ಷ ಅಕ್ಷಯ್ ಭಾರತದ ಪೌರತ್ವ ಪಡೆದಿದ್ದಾರೆ. ಇದಾದ ಬಳಿಕ ಅವರು ಮೊದಲ ಬಾರಿಗೆ ವೋಟ್ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ, ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೋಟಿಂಗ್ ನಡೆಯುತ್ತಿದೆ. ಇದರಲ್ಲಿ ಮುಂಬೈ ಕೂಡ ಸೇರಿದೆ. ಮುಂಬೈನಲ್ಲಿ ಮತ ಹಾಕಿದ ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ‘ನಮ್ಮ ಭಾರತ ಅಭಿವೃದ್ಧಿ ಹೊಂದಬೇಕು, ಬಲಿಷ್ಠಗೊಳ್ಳಬೇಕು. ಅದನ್ನ ಮನಸ್ಸಲ್ಲಿ ಇಟ್ಟುಕೊಂಡು ವೋಟ್ ಮಾಡಿದ್ದೇನೆ. ಒಳ್ಳೆಯ ರೀತಿಯಲ್ಲಿ ವೋಟಿಂಗ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ’ ಅಂತ ಹೇಳಿದ್ದಾರೆ.