- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಕಪಾಳಮೋಕ್ಷ
- ಚುನಾವಣೆಯ ಪ್ರಚಾರದ ವೇಳೆ ಈ ಘಟನೆ ನಡೆದಿದೆ
ಲೋಕಸಭಾ ಚುನಾವಣೆ ಐದನೇ ಹಂತದ ಮತದಾನ ಸೋಮವಾರ ಆರಂಭವಾಗಿದೆ. ರೋಡ್ ಶೋ ವೇಳೆ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ಗೆ ವ್ಯಕ್ತಿಯೊಬ್ಬರು ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಜೈಲಿನಿಂದ ಜಬಿಡುಗಡೆಯಾದ ನಂತರ 2024 ರ ಚುನಾವಣೆಯ ಸಮಯದಲ್ಲಿ ಪಕ್ಷದ ಪ್ರಚಾರದ ವೇಳೆ ಈ ಘಟನೆ ಸಂಭವಿಸಿದೆ.