ಲೋಕಸಭೆ ಚುನಾವಣೆ – 2024 ಸದ್ಯ ಈ ಚುಣಾವಣಾ ಪಲಿತಾಂಶಕ್ಕೆ ಭಾರತ ದೇಶ ಪ್ರಜೆಗಳಷ್ಟೇ ಅಲ್ಲದೆ ವಿದೇಶ ಪ್ರಜೆಗಳು, ನಾಯಕರುಗಳು ಕೂಡಾ ಕಾದು ಕುಳಿತಿದ್ದಾರೆ. ಏನಿದು? ಸುದ್ದಿ ಅಂತಿರಾ.
ಪ್ರಸ್ತುತ ಲೋಕಸಭೆ ಚುನಾವಣೆ ಅಖಾಡದಲ್ಲಿ ಯಾರ ಗೆಲ್ತಾರೋ ಯಾರು ಸೋಲ್ತಾರೋ. ಅದು ಫಲಿತಾಂಶದ ನಂತರನೇ ತಿಳಿಯೋದು. ಆದರೆ ಭಾರತ ಲೋಕಸಭಾ ಚುನಾವಣೆಯ ಬಗ್ಗೆ ಅಮೆರಿಕದ ರಾಜಕೀಯ ವಿಜ್ಞಾನಿ ಮತ್ತು ಜಾಗತೀಕ ರಾಜಕೀಯ ಸಲಹೆಗಾರ ಇಯಾನ್ ಬ್ರೆಮ್ಮರ್ ಏನ್ ಹೇಳಿದ್ದಾರೆ ಗೊತ್ತಾ.
• ಬಿಜೆಪಿ ಸುಮಾರು 305 ಸ್ಥಾನಗಳನ್ನು ಗೆಲ್ಲಲಿದೆ
• ಜಾಗತಿಕ ದೃಷ್ಟಿಕೋನದಿಂದ ಗಮನಿಸಿದಾಗ ಭಾರತದ ಸಾರ್ವತ್ರಿಕ ಚುನಾವಣೆಯು ಏಕೈಕ ಸ್ಥಿರ ಹಾಗೂ ಅಚಲ ವಿಷಯವಾಗಿ ಕಾಣಿಸುತ್ತದೆ.
• ಉಳಿದಂತೆ ಎಲ್ಲವೂ ಸಮಸ್ಯಾತ್ಮಕವಾಗಿದೆ ಎಂದು ಅಪಾಯ ಮತ್ತು ಸಂಶೋಧನ ಸಲಹಾ ಸಂಸ್ಥೆ ಯುರೇಷಿಯಾ ಸಮೂಹದ ಸಂಸ್ಥಾಪಕರೂ ಆಗಿರುವ ಬ್ರೆಮ್ಮರ್ ತಿಳಿಸಿದ್ದಾರೆ.
ನಾನು ಅಗಾಧವಾಗಿ ಸ್ಥೂಲ ಮಟ್ಟದ ಭೌಗೋಳಿಕ ರಾಜಕೀಯ ಅನಿಶ್ಚಿತತೆಯನ್ನು ಹೊಂದಿದ್ದೇವೆ, ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ನಡೆಯುತ್ತಿಲ್ಲ. ರಾಜಕೀಯ ಜಾಗತಿಕ ಮಾರುಕಟ್ಟೆಯೊಳಗೆ ತನ್ನನ್ನು ತಾನು ಸೇರಸಿಕೊಳ್ಳುತ್ತಿದೆ. ಯುದ್ಧಗಳು, ಅಮೆರಿಕಾ – ಚೀನಾ ಸಂಬಂಧಗಳು ಮತ್ತು ಅಮೆರಿಕಾ ಚುನಾವಣೆಗಳು ಎಲ್ಲವೂ ಅದರ ದೊಡ್ಡ ಭಾಗವಾಗಿದೆ ಎಂದು ಹೇಳಿದ್ದಾರೆ.