ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ತೀವ್ರವಾಗಿ ಬೇಸರಗೊಂಡಿರುವ ಸಿಎಂ ಸಿದ್ದರಾಮಯ್ಯ ತಮ್ಮ ಅಪ್ತರ ಬಳಿ ದುಃಖವನ್ನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಮುಖಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ?
ಲೋಕಾಯುಕ್ತ ನೋಟಿಸ್ ಗೆ ಅಕ್ಷರಶಃ ಬೇಸರಗೊಂಡಿದ್ದಾರೆ ಸಿಎಂ ಸಿದ್ದರಾಮಯ್ಯನವರು. ನೋಟಿಸ್ ಕೈಸೇರುತ್ತಿದ್ದಂತೆ ಆಪ್ತರ ಬಳಿ ಬೇಸರದ ಮಾತುಗಳನ್ನಾಡಿದ್ದಾರೆ. ಏನಯ್ಯಾ..ಹೀಗಾಯ್ತಲ್ಲ, 40 ವರ್ಷದ ರಾಜಕೀಯ ಜೀವನದಲ್ಲಿ ಎಂದೂ ಹೀಗೆ ಆಗಿರಲಿಲ್ಲ, ಯಾರ ಮುಂದೆಯೂ ವಿಚಾರಣೆ ಅಂತ ಹೋಗಿ ನಿಂತಿದ್ದೇ ಇಲ್ಲ, ವಿಪಕ್ಷದಲ್ಲಿ ಇದ್ದಾಗ್ಲೇ ಅಧಿಕಾರಿಗಳು ನನ್ನ ನೋಡಿದ್ರೆ ಭಯ ಪಡುತ್ತಿದ್ರು. ಆದರೆ ಈಗ ಅದೇ ಅಧಿಕಾರಿಗಳ ಮುಂದೆ ಹೋಗಿ ನಿಂತುಕೊಳ್ಳಬೇಕು ಎಂದು ತಮ್ಮ ಪರಿಸ್ಥಿತಿ ಬಗ್ಗೆ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಸಿಎಂ.