ಮದ್ದೂರಿನಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಗುಡುಗಿದ್ದಾರೆ. ದೊಡ್ಡ ಆಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ ಅಂತ ಡಿಕೆಶಿ ಗುಡುಗಿದ್ದಾರೆ.
ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ, ಯಡಿಯೂರಪ್ಪ ಜೈಲಿಗೆ ಹಾಕಿಸಿದ್ದು ಯಾರು? ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಯಾಕೆ ಹಣೆ ಪ್ರಮಾಣ ಮಾಡಲು ಹೋಗಿದ್ರಿ? ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ ಎಂದಿದ್ದಾರೆ. ತಿಮ್ಮಪ್ಪ ಕಾಸು ಬಿಡಲ್ಲ, ಮಂಜುನಾಥ ಬಿಡಲ್ಲ. ಮಂಜುನಾಥ ಸ್ವಾಮಿ ಸಹವಾಸಕ್ಕೆ ಹೋಗ ಬೇಡ ಅಂತ ಹೆಚ್ಡಿಕೆಗೆ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.
ಗ್ಯಾರಂಟಿ ನಿಲ್ಲಸಬೇಕೆಂದು ಬಿಜೆಪಿ ಜೆಡಿಎಸ್ ಪ್ರಯತ್ನ ಮಾಡುತ್ತಿದೆ. 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವುದಾಗಿ ಹೆಚ್ಡಿಕೆ ಹೇಳುತ್ತಾರೆ. ಆದರೆ ಬ್ರಿಟಿಷರ ಕೈಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ, ಇನ್ನು ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ಅತಂ ವ್ಯಂಗ್ಯವಾಡಿದ್ರು. ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, ನಮ್ಮದು 10 ವರ್ಷದ ಸರ್ಕಾರ ಅಂತ ಟಾಂಗ್ ಕೊಟ್ರು.
ನಿಮ್ಮ ಹಣೆಬರಹದಲ್ಲಿ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ಕಾರ್ಯಕ್ರಮ ನಿಲ್ಲಿಸಲು ಆಗಲ್ಲ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಬದುಕಿನ ಮೇಲೆ ರಾಜಕಾರಣ. ಮುಸ್ಲಿಮರು ಇಲ್ಲ ಎಂದಿದ್ರೆ ನೀವು MLA ಆಗ್ತಿರಲಿಲ್ಲ, ನಿಮ್ಮ ತಂದೆ CM ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ವೋಟ್ ಹಾಕಿಲ್ಲ ಅಂತಾ ಧಮ್ಕಿ ಹಾಕ್ತಾರೆ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ ಕುಮಾರಸ್ವಾಮಿ ಅಂತ ಡಿಕೆ ಶಿವಕುಮಾರ್ ಹೇಳಿದ್ರು.
ಪೆನ್ ಡ್ರೈವ್ ವಿಚಾರದಲ್ಲಿ ನಾವ್ಯಾರು ಬಂದಿರಲಿಲ್ಲ. ಮಹಾನಾಯಕ ಪೆನ್ ಡ್ರೈವ್ ಹಂಚಿದ್ದು ಎಂದಿದ್ದೆ. ಅದಕ್ಕೆ ಸ್ಟಿಕ್ ಆನ್ ಆಗಬೇಕಿತ್ತು. ನೀನು ಸಿಎಂ ಆಗಿದ್ದಾಗ ಡಿಕೆಶಿ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದಾಗಲೇ ನಾನು ಹೆದರಿಲ್ಲ. ಆದಾದ ಮೇಲೆ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದೆ. ದೊಡ್ಡ ಆಲದಹಳ್ಳಿ ಕೆಂಪೇಗೌಡನ ಮಗ ಯಾರಿಗೂ ಹೆದರುವ ಮಗ ಅಲ್ಲ ಅಂತ ಹೆಚ್ಡಿಕೆ ವಿರುದ್ಧ ಡಿಕೆಶಿ ಗುಡುಗಿದ್ರು.
ನನ್ನ ಅಜ್ಜಯ್ಯನ ಸುದ್ದಿ ನಿಮಗೆ ಬೇಡ. ಯಡಿಯೂರಪ್ಪ ಜೈಲಿಗೆ ಹಾಕಿಸಿದ್ದು ಯಾರು? ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಯಾಕೆ ಆಣೆ ಪ್ರಮಾಣ ಮಾಡಲು ಹೋಗಿದ್ರಿ? ಎಲ್ಲವೂ ರಾಜ್ಯದ ಜನರಿಗೆ ಗೊತ್ತಿದೆ. ತಿಮ್ಮಪ್ಪ ಕಾಸು ಬಿಡಲ್ಲ, ಮಂಜುನಾಥ ಬಿಡಲ್ಲ. ಮಂಜುನಾಥ ಸ್ವಾಮಿ ಸಹವಾಸಕ್ಕೆ ಹೋಗ ಬೇಡ ಅಂತ ಹೆಚ್ಡಿಕೆಗೆ ಡಿಕೆಶಿ ಎಚ್ಚರಿಕೆ ನೀಡಿದ್ರು.